ಚಿತ್ರದುರ್ಗ ನಗರದ ಈ ಏರಿಯಾಗಳಲ್ಲಿ ಫೆಬ್ರವರಿ 25 ರಂದು ವಿದ್ಯುತ್ ವ್ಯತ್ಯಯ

1 Min Read

 

ಚಿತ್ರದುರ್ಗ,(ಫೆ.23) : ಫೆಬ್ರವರಿ 25 ರಂದು ಚಿತ್ರದುರ್ಗ ವಿ.ವಿ. ಕೇಂದ್ರದಲ್ಲಿ ಪರಿವರ್ತಕ 1 ಮತ್ತು 2 ರ ಭೂಗತ ಕೇಬಲ್‌ನ ಮರು ವ್ಯವಸ್ಥೆ ಕಾರ್ಯ ಜರುಗಲಿದೆ.

ಆದ್ದರಿಂದ ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿ ಬರುವ 66/11 ಕೆ.ವಿ ಮಾರ್ಗ ಹೊರಹೋಗುವ ಎಲ್ಲಾ ಎನ್‌ಜೆವೈ ಮತ್ತು ಕೃಷಿ 11 ಕೆವಿ ಮಾರ್ಗಗಳಲ್ಲಿ

ಫೆಬ್ರವರಿ 25ರ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಚಿತ್ರದುರ್ಗ ನಗರ, ಕೆಳಗೋಟೆ, ಬ್ಯಾಂಕ್ ಕಾಲೋನಿ, ಗೋನೂರು, ಬೆಲಘಟ್ಟ, ಗುಡ್ಡದರಂಗವ್ವನಹಳ್ಳಿ, ವಿದ್ಯಾನಗರ, ಸೀಬಾರ, ಸಿ.ಜಿ.ಹಳ್ಳಿ, ಜೆ.ಸಿ.ಆರ್, ಚಂದ್ರವಳ್ಳಿ, ಪಿಲ್ಲೇಕೆರನಹಳ್ಳಿ, ಮಿಲ್ಲ ಏರಿಯಾ, ಕೆ.ಡ್ಲೂ.ಎಸ್.ಎಸ್.ಬಿ, ಯುನಿವರ್ಸಿಟಿ ಮತ್ತು ಸುತ್ತಮುತ್ತಲಿನ ಪ್ರದೇಶ ಹಾಗೂ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *