ಫೆಬ್ರವರಿ 07 ರಿಂದ 10 ರವರೆಗೆ ತುರುವನೂರು ಸುತ್ತಮುತ್ತಲಿನ ಈ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ

1 Min Read

 

 

ಚಿತ್ರದುರ್ಗ, ಫೆ.06:  ಚಿತ್ರದುರ್ಗ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ತುರುವನೂರು ಗ್ರಾಮದ ಪ್ರವಾಸಿ ಮಂದಿರದಿಂದ ಅಂಗನವಾಡಿ ಕೇಂದ್ರದವರೆಗೆ ರಸ್ತೆ ಅಗಲೀಕರಣ ಕಾಮಗಾರಿಗೆ ಅಡ್ಡಲಾಗಿರುವ 11ಕೆ.ವಿ/ಎಲ್.ಟಿ ಮಾರ್ಗವನ್ನು ಸ್ಥಳಾಂತರಿಸುವ ಕಾರಣದಿಂದ ಸದರಿ ದಿನಾಂಕದAದು ಬೆಳಿಗ್ಗೆ 10.00 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ಅಡಚಣೆಯಾಗುವ ಮಾರ್ಗಗಳು :
66/11ಕೆವಿ ತುರುವನೂರು ಕೇಂದ್ರದಿಂದ ಸರಬರಾಜಾಗುವ 11ಕೆವಿ ಮಾರ್ಗ, ಬೊಮ್ಮಕ್ಕನಹಳ್ಳಿ, ಕೂನಬೇವು, ಅವಳೇಹಳ್ಳಿ, ದೊಡ್ಡಗಟ್ಟ, ತುರುವನೂರು ಎನ್.ಜೆ.ವೈ, ಕರಿಯಮ್ಮನಹಟ್ಟಿ, ಹುಣಸೇಕಟ್ಟೆ ಮತ್ತು ಪೇಲೂರಹಟ್ಟಿ ಎನ್.ಜೆ.ವೈ, ಬೆಳಗಟ್ಟ, ಮತ್ತು ಗೋನೂರು ಗ್ರಾಮ ಪಂಚಾಯ್ತಿ ಹಾಗೂ ದ್ಯಾಮವ್ವನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವ್ಯತ್ಯಯವಾಗಲಿದೆ ಎಂದು ಗ್ರಾಮೀಣ ಉಪ ವಿಭಾಗ ಸಹಾಯಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *