ದಾವಣಗೆರೆ,ಸೆಪ್ಟೆಂಬರ್.19 : ನ್ಯಾಷನಲ್ ಹೈವೇನಲ್ಲಿ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿ ಇರುವುದರಿಂದ ಸೆಪ್ಟೆಂಬರ್ 20 ರಂದು ಬೆಳ್ಳಿಗ್ಗೆ 10 ರಿಂದ ಸಂಜೆ 5 ರವರೆಗೆ ಶಾಮನೂರು, ಬನಶಂಕರಿ ಬಡಾವಣೆ, ಶಿವ ಪಾರ್ವತಿ ಬಡಾವಣೆ, ಜೆ.ಹೆಚ್ ಪಟೇಲ್ ನಗರ, ದೇವರಬೆಳಕೆರೆ ರಸ್ತೆ, ಡಾಲರ್ಸ್ ಕಾಲೋನಿ, ಜರಿಕಟ್ಟೆ, ಮುದಹದಡಿ, ಹೊಸ ಕುಂದವಾಡ, ಹಳೆಕುಂದವಾಡ, ಕೆ.ಹೆಚ್.ಬಿ ಕಾಲೋನಿ ಮತ್ತು ರಶ್ಮಿ ಹಾಸ್ಟೆಲ್ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.


