ಸುದ್ದಿಒನ್, ಚಿತ್ರದುರ್ಗ, ಜೂನ್ 13 : ನಗರದಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿ ಇರುವುದರಿಂದ ಜೂನ್ 14 ಮತ್ತು 15 ರಂದು ಎರಡು ದಿನಗಳ ಕಾಲ ಈ ಕೆಳಕಂಡ ನಗರ ಪ್ರದೇಶಗಳಲ್ಲಿ ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೂ ವಿದ್ಯುತ್ ಸರಬರಾಜು ಇರುವುದಿಲ್ಲ.
ಆದ್ದರಿಂದ, ಚಿತ್ರದುರ್ಗ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಎಲ್ಲಾ ಗ್ರಾಹಕರು ವಿದ್ಯುತ್ ನಿಲುಗಡೆಯ ಸಮಯದಲ್ಲಿ ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ 14 ರಂದು ವಿದ್ಯುತ್ ಅಡಚಣೆ ಯಾಗುವ ಪ್ರದೇಶಗಳು :
ಐ.ಯು.ಡಿ.ಪಿ. ಲೇಔಟ್, ಕಂದಾಯಗಿರಿ ನಗರ, ಕೆ.ಹೆಚ್.ಬಿ., ಟೀಚರ್ಸ್ ಕಾಲೋನಿ, ಸ್ಟೇಡಿಯಂ ರಸ್ತೆ, ಜೋಗಿಮಟ್ಟಿ ರಸ್ತೆ, ಗಾಂಧಿ ನಗರ, ಬುದ್ಧ ನಗರ, ಪ್ರಶಾಂತ್ ನಗರ, ವಿ.ವಿ ಬಡಾವಣೆ ಮತ್ತು ಸುತ್ತಮುತ್ತಲ ಪ್ರದೇಶಗಳು.
ಜೂನ್ 15 ರಂದು ವಿದ್ಯುತ್ ಅಡಚಣೆ ಯಾಗುವ ಪ್ರದೇಶಗಳು : ಜೆ.ಸಿ.ಆರ್, ವಿ.ಪಿ ಬಡಾವಣೆ, ಜಿ.ಜಿ. ಹಟ್ಟಿ, ಹೊರಪೇಟೆ, ಗೋಪಾಲಪುರ ರಸ್ತೆ, ಪ್ರಸನ್ನ ಟಾಕೀಸ್ ರಸ್ತೆ, ಮಾರುತಿ ನಗರ, ಬ್ಯಾಂಕ್ ಕಾಲೋನಿ, ಸಾಯಿ ಸಿಟಿ, ಕೆ.ಹೆಚ್.ಬಿ ಕಾಲೋನಿ, ಚಿತ್ರಾಡಾನ್ ಬಾಸ್ಕೋ ಸುತ್ತ ಮುತ್ತ, ಶ್ರೀಶೈಲ ಬಡಾವಣೆ, ಅಲೆಕ್ಸಾಂಡರ್ ಬಡಾವಣೆ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ವಿದ್ಯುತ್ ಸರಬರಾಜು ಇರುವುದಿಲ್ಲ.



