ಏಪ್ರಿಲ್ 26 ರಂದು ಭರಮಸಾಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

1 Min Read

ಚಿತ್ರದುರ್ಗ,( ಏ.25)  : ಚಿತ್ರದುರ್ಗ ಗ್ರಾಮೀಣ ಉಪ ವಿಭಾಗ ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಭರಮಸಾಗರ ವಿ.ವಿ ಕೇಂದ್ರದ ಹತ್ತಿರ ಹಾಲಿ ಇರುವ ಎ.ಬಿ ಕೇಬಲ್ ತೆಗೆದು ರ‍್ಯಾಬಿಟ್ ವಾಹಕ ಅಳವಡಿಸುವ ಕಾಮಗಾರಿ ಮತ್ತು ಎಫ್-8 ನಂದಿಹಳ್ಳಿ ಮಾರ್ಗಕ್ಕೆ ಲಿಂಕ್ ಲೈನ್ ಕಾಮಗಾರಿ ಜರುಗಲಿದೆ.

ಆದ್ದರಿಂದ ಭರಮಸಾಗರ ವಿ.ವಿ ಕೇಂದ್ರದಿಂದ ಸರಬರಾಜಾಗುವ 11 ಕೆವಿ ಮಾರ್ಗಗಳಲ್ಲಿ ಇದೇ ಏ.26 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ವರಗೆ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಹೆಗ್ಗೆರೆ, ಎಮ್ಮೆಹಟ್ಟಿ, ನಲ್ಲಿಕಟ್ಟೆ, ಕೊಳಹಾಳ್ ಎನ್.ಜೆ.ವೈ, ಹೆಗಡೆಹಾಳ್, ವಿಜಾಪುರ, ಶಿವನಕೆರೆ, ನಂದಿಹಳ್ಳಿ, ಬಹದ್ದೂರಗಟ್ಟ, ಅಡವಿಗೋಲ್ಲರಹಟ್ಟಿ ಎನ್.ಜೆ.ವೈ, ಭರಮಸಾಗರ, ಪಾಮರಹಳ್ಳಿ, ಕೋಗುಂಡೆ ಎನ್.ಜೆ.ವೈ, ಎಸ್.ಕೆ.ಎಂ, ಕೋಡಿಹಳ್ಳಿ, ಹರಳಕಟ್ಟೆ ಗ್ರಾಮಗಳಲ್ಲಿ ವಿದ್ಯತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *