ಮೈಸೂರು: ಕಾವೇರಿಗಾಗಿ ಇಂದು ಬೆಂಗಳೂರು ಬಂದ್ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸುತ್ತಾ ಇದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕೋರ್ಟ್ ನಲ್ಲಿ ಸಭೆ, ಪ್ರತಿಭಟನೆ ಮಾಡಬಾರದುಬೆಂಬ ಸೂಚನೆ ನೀಡಿದ್ದಾರೆ. ಹೀಗಾಗಿ ನಾವೂ ಪ್ರತಿಭಟನೆ ನಡೆಸುತ್ತಿಲ್ಲ ಎಂದಿದ್ದಾರೆ.
ನಾವೂ ಬಂದ್ ಮಾಡುತ್ತೀವಿ ಅಂತ ಹೇಳಿದರು. ಬಂದ್ ಮಾಡುವುದಕ್ಕೆ ಎಲ್ಲರಿಗೂ ಅವಕಾಶವಿದೆ. ಆದರೆ ಕಾವೇರಿ ವಿಚಾರದಲ್ಲಿ ರಾಜಕೀಯ ಬೇಡ. ಯಾರ ಹಿತದೃಷ್ಟಿಯಿಂದಲೂ ಅವರು ಮಾಡುತ್ತಿಲ್ಲ. ಆದರೆ ರಾಜಕೀಯ ಮಾಡಬಾರದು. ರಾಜಕೀಯ ಲಾಭಕ್ಕಾಗಿ ಬಳಸಬಾರದು ಎಂದಿದ್ದಾರೆ.
ಇನ್ನು ಕಾಂಗ್ರೆಸ್ ನವರು ತಮಿಳುನಾಡಿನ ಬಿಟೀಂ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದರು. ಈ ಬಗ್ಗೆಯೂ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಡಿಎಂಕೆ ಅವರು ತಮಿಳುನಾಡಿವರು. ಬಿಜೆಪಿಯವರು ನಿನ್ನೆವರೆಗೂ ಎಐಎಡಿಎಂಕೆ ಜೊತೆ ಇದ್ದರಲ್ಲ ಅವರನ್ನ ಏನು ಅನ್ನೋದು. ರಾಜಕಾರಣಕ್ಕೋಸ್ಕರ ಏನೇನೋ ಹೇಳಬಾರದು. ರಾಜ್ಯ ಸರ್ಕಾರ ವಿಫಲ ಆಗಿದೆ ಅಂತೆಲ್ಲ ಹೇಳಬಾರದು. ಕಾಂಗ್ರೆಸ್ ನಾಡಿನ ಜನರ ಹಿತರಕ್ಷಣೆ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ನಮಗೆ ಅಧಿಕಾರಕ್ಕಿಂತ ರಾಜ್ಯದ ಜನತೆಯೇ ಮುಖ್ಯ ಎಂದಿದ್ದಾರೆ. ಇಡೀ ದೇಶದಲ್ಲಿ ಬಿಜೆಪಿ ವಿರುದ್ಧವಾದಂತ ಶಕ್ತಿಗಳು ಈ ಬಾರಿ ಒಟ್ಟುಗೂಡುತ್ತಿವೆ ಎಂದಿದ್ದಾರೆ.