ಜೂನ್ 3 ರಿಂದ 5 ರವರೆಗೆ ವಿದ್ಯುತ್ ವ್ಯತ್ಯಯ

suddionenews
0 Min Read

 

ಚಿತ್ರದುರ್ಗ: ಜೂನ್ 01: ತುರುವನೂರು ಶಾಖೆಯ ತುರುವನೂರು ಬಸ್ ಸ್ಟ್ಯಾಂಡ್‍ನಿಂದ ಪ್ರಥಮ ದರ್ಜೆ ಕಾಲೇಜಿನವರೆಗೆ ಮುಖ್ಯ ರಸ್ತೆಯ ಅಗಲೀಕರಣದ ಸಲುವಾಗಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವುದರಿಂದ ಜೂನ್ 3 ರಿಂದ 5ರವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‍ನಲ್ಲಿ ವ್ಯತ್ಯಯವಾಗಲಿದೆ.

ತುರುವನೂರು ವಿ.ವಿ.ಕೇಂದ್ರದಿಂದ ಹೊರಡುವ ಎಫ್-4 ದೊಡ್ಡಘಟ್ಟ ಮತ್ತು ಎಫ್-5 ತುರುವನೂರು ಮಾರ್ಗಕ್ಕೆ ಒಳಪಡುವ ತುರುವನೂರು, ಕಡಬನಕಟ್ಟೆ, ಮ್ಯಾಸರಹಟ್ಟಿ, ದೊಡ್ಡಘಟ್ಟ, ಉಪ್ಪಾರಹಟ್ಟಿ ಗ್ರಾಮಗಳ ಸುತ್ತಮುತ್ತಲಿನ ಗ್ರಾಹಕರು ಸಹಕರಿಸಬೇಕೆಂದು ಚಿತ್ರದುರ್ಗ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್  ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *