ದಾವಣಗೆರೆ (ಫೆ.09) : ದಾವಣಗೆರೆ ನಗರ ಉಪ ವಿಭಾಗ 220 ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಡುವ ಫೀಡರ್ಗಳಲ್ಲಿ ಜಲಸಿರಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.10 ರಂದು ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಎಫ್-14 ವಿದ್ಯಾನಗರ ಫೀಡರ್: ಶಿವಕುಮಾರಸ್ವಾಮಿ ಬಡಾವಣೆ, 1 ಮತ್ತು 2ನೇ ಹಂತ, ಉದಯ ಮಾರ್ಟ್, ಚಿಕ್ಕಮ್ಮಣ್ಣಿ ದೇವರಾಜ ಅರಸ್ ಬಡಾವಣೆ, ತರಳಬಾಳು ಬಡಾವಣೆ, ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ಎಫ್-15 ರಂಗನಾಥ ಫೀಡರ್: ತರಳಬಾಳು ಬಡಾವಣೆ, ವಾಣಿರೈಸ್ ಮಿಲ್ ಹಿಂಭಾಗ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.