ದಾವಣಗೆರೆ | ಡಿ.31 ರಂದು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

0 Min Read

 

ದಾವಣಗೆರೆ (ಡಿ.30) : ದಾವಣಗೆರೆ 220 ಕೆ.ವಿ ಎಸ್.ಆರ್.ಎಸ್. ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಡುವ ವಿದ್ಯಾನಗರ ಫೀಡರ್‍ನಲ್ಲಿ ಜಲಸಿರಿ  ಯೋಜನೆಯಡಿಯಲ್ಲಿ ನಿರಂತರ ಶುದ್ದ ಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಡಿ.31 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯಾನಗರ ಫೀಡರ್‍ನ ವ್ಯಾಪ್ತಿಯ ಶಿವಕುಮಾರಸ್ವಾಮಿ ಬಡಾವಣೆ 1 ಮತ್ತು 2ನೇ ಹಂತ, ಹದಡಿ ರಸ್ತೆ, ಸೇಂಟ್‍ಜಾನ್ ಸ್ಕೂಲ್, ಐ.ಟಿ.ಐ. ಕಾಲೇಜು,  ರಿಂಗ್ ರಸ್ತೆ, ಶ್ರೀನಿವಾಸ ನಗರ, ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *