ದಾವಣಗೆರೆ (ಡಿ.21): 66/11 ಕೆವಿ ಜಗಳೂರು-ತುರವನೂರು ವಿದ್ಯುತ್ ಮಾರ್ಗದ ನಿರ್ಮಾಣ ಕಾಮಗಾರಿ ನಿರ್ವಹಿಸಬೇಕಾಗಿರುವುದರಿಂದ ಡಿ.22 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಜಗಳೂರು ವಿ.ವಿ ಕೇಂದ್ರ ಮತ್ತು ಬಿದರಕೆರೆ ವಿ.ವಿ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳು, ನೀರಾವರಿ ಪಂಪ್ ಸೆಟ್ಟು ಮಾರ್ಗಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



