ಬಳ್ಳಾರಿ | ಡಿ. 29 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

suddionenews
1 Min Read

 

ಬಳ್ಳಾರಿ, (ಡಿ.28): ಬಳ್ಳಾರಿಯ ತಾಳೂರ್ ರೋಡ್ ನಲ್ಲಿ ರಸ್ತೆ ಅಗಲೀಕರಣ ನಿಮಿತ್ತ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯವನ್ನು ಡಿ.29ರಂದು ಕೈಗೊಳ್ಳುತ್ತಿರುವುರಿಂದ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ.

ಡಿ.29ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ವ್ಯತ್ಯಯವಾಗುವ ಪ್ರದೇಶಗಳು: ಎಫ್-6 ಫೀಡರ್‍ನ ತಾಳೂರು ರೋಡ್ , ಸ್ನೇಹ ಕಾಲೋನಿ , ಶ್ರೀನಗರ , ರೇಣುಕಾ ನಗರ , ಭಗತ್‍ಸಿಂಗ್ ನಗರ , ಕನ್ನಡ ನಗರ , ಮಹಾನಂದಿ ಕೊಟ್ಟಂ , ಪಾರ್ವತಿ ನಗರ , ಎಸ್.ಪಿ. ಸರ್ಕಲ್ , ಶಾಸ್ತ್ರೀ ನಗರ , ಬ್ಯಾಂಕ್ ಕಾಲೋನಿ , ಬಸವನಕುಂಟೆ , ಸಿರುಗುಪ್ಪ ರೋಡ್ , ರಾಮ ನಗರ,ಅವಂಬಾವಿ.
ಸಾರ್ವಜನಿಕರು ಹಾಗೂ ಗ್ರಾಹಕರು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *