ತನ್ನ 23 ವರ್ಷಗಳ ಕ್ರಿಕೆಟ್ ವೃತ್ತಿಗೆ ಹರ್ಭಜನ್ ಸಿಂಗ್ ನಿವೃತ್ತಿ ಘೋಷಿಸಿದ್ದಾರೆ. ಇದು ಕ್ರೀಡಾಭಿಮಾನಿಗಳಿಗೆ ಪ್ರಶ್ನಡ ಹುಟ್ಟು ಹಾಕುವಂತೆ ಮಾಡಿತ್ತು. ಹಾಗಾದ್ರೆ ಹರ್ಭಜನ್ ಸಿಂಗ್ ಮುಂದಿನ ನಡೆ ಏನು ಎಂಬ ಪ್ರಶ್ನೆ ಏಳುವಂತೆ ಮಾಡಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಭಜ್ಜಿ ಅವರು ಆಯ್ಕೆ ಮಾಡಿಕೊಂಡ ಮುಂದಿನ ನಡೆ ಅಂದ್ರೆ ರಾಜಕೀಯ ಕ್ಷೇತ್ರ.
ಭಜ್ಜಿ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಈ ಸಂಬಂಧ ಊಹಾಪೋಹಗಳು ಎದ್ದಿದ್ದವು. ಇದೀಗ ಅದು ಕನ್ಫರ್ಮ್ ಆಗಿದೆ. ಭಜ್ಜಿ ರಾಜಕೀಯ ಸೇರಿ ತನ್ನ ರಾಜ್ಯಕ್ಕೆ ಸೇವೆ ಸಲ್ಲಿಸುವ ಮನಸ್ಸು ಮಾಡಿದ್ದಾರೆ. ಈ ಬಗ್ಗೆ ಹರ್ಭಜನ್ ಸಿಂಗ್ ಅವರೇ ತಿಳಿಸಿದ್ದಾರೆ.
ರಾಜಕೀಯ ಕ್ಷೇತ್ರದ ಮೂಲಕ ನನ್ನ ಒಂಜಾಬ್ ರಾಜ್ಯಕ್ಕೆ ಸೇವೆ ಸಲ್ಲಿಸಲಿದ್ದೇನೆ. ಪ್ರತಿಯೊಂದು ರಾಜಕೀಯ ಪಕ್ಷದ ನಾಯಕರು ನನಗೆ ಪರಿಚಿತರಿದ್ದಾರೆ. ನಾನು ಯಾವುದೇ ಪಕ್ಷಕ್ಕೆ ಸೇರುವುದಾದರೂ ಆ ವಿಚಾರ ತಿಳಿಸುತ್ತೇನೆ. ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಆದ್ರೆ ರಾಜಕೀಯ ಪಕ್ಷದಿಂದ ಪಂಜಾಬ್ ಗೆ ಸೇವೆ ಸಲ್ಲಿಸಲಿದ್ದೇನೆ ಎಂದಿದ್ದಾರೆ.