ರಾಜಕುಮಾರ’ನಿಗಾಗಿ ಒಂದಾದ ರಾಜಕೀಯ ನಾಯಕರು : ಪದ್ಮಶ್ರೀಗೆ ಒತ್ತಾಯ..!

ಬೆಂಗಳೂರು: ಪುನೀತ್ ರಾಜ್‍ಕುಮಾರ್ ಎಲ್ಲರಿಗೂ ಇಷ್ಟ. ಇಂಥವರಿಗೆ ಅವರಿಷ್ಟ ಇಲ್ಲ ಅನ್ನುವ ಹಾಗೇ ಇಲ್ಲ. ಅವರಿಲ್ಲ ಎಂದಾಗ ಇಡೀ ಕರುನಾಡು ಕೊರಗಿದೆ, ಕಣ್ಣೀರು ಹಾಕಿದ್ದೇ ಅದಕ್ಕೆ ಉದಾಹರಣೆ. ಯಾವಾಗಲೂ ರಾಜಕೀಯದಲ್ಲಿ ಕಿತ್ತಾಡಿಕೊಳ್ಳುತ್ತಿದ್ದ, ವಿರೋಧ ಪಕ್ಷದವರನ್ನ ಟೀಕಿಸುತ್ತಿದ್ದ ರಾಜಕೀಯ ನಾಯಕರು ಈಗ ಅಪ್ಪುಗಾಗಿ ಒಂದೇ ಧ್ವನಿಗೂಡಿಸಿದ್ದಾರೆ.

ಬಲಗೈ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಅನ್ನೋ ಮಾತಿದೆ. ಎಷ್ಟೇ ಆಗಲಿ ದೊಡ್ಮನೆಯವರಲ್ಲವೇ. ಇದನ್ನೇ ಚಾಚೂ ತಪ್ಪದೇ ಪಾಲಿಸಿದ್ದಾರೆ. ಅದೆಷ್ಟು ಜನರಿಗೆ ಪುನೀತ್ ನೆರವಾಗಿದ್ದರು ಅನ್ನೋದು ಅವರ ನಿಧನದ ಬಳಿಕವಷ್ಟೇ ಗೊತ್ತಾಗಿದೆ. ಅನಾಥಶ್ರಮಗಳು, ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದವರು. ನಟನೆಯಲ್ಲಿ ಪ್ರಾವಿಣ್ಯತೆ, ನಡತೆಯಲ್ಲಿ ಇವರನ್ನ ಮಿರೀಸುವವರಿಲ್ಲ. ಇಂಥ ಅದ್ಭುತ ವ್ಯಕ್ತಿತ್ವದ ವ್ಯಕ್ತಿಗೆ ಪದ್ಮಶ್ರೀ ಪ್ತಶಸ್ತಿ ನೀಡಬೇಕೆಂಬುದು ಎಲ್ಲರ ಒತ್ತಾಯ.

ಇದಕ್ಕೆ ರಾಜಕೀಯ ನಾಯಕರು ಧ್ವನಿಗೂಡಿಸಿದ್ದಾರೆ. ದೇಶದ ಉನ್ನತ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿಯನ್ನ ಪುನೀತ್ ಗೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಅಭಿಮಾನಿಗಳದ್ದು ಅದೇ ಆಸೆ ಅಪ್ಪುಗೆ ಆ ಪ್ರಶಸ್ತಿ ಸಿಗ್ಬೇಕು ಅನ್ನೋದು. ಈಗ ರಾಜಕೀಯ ನಾಯಕರ ಒತ್ತಾಸೆಯೂ ಅದೇ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *