ಮೈಸೂರು: ಇತ್ತಿಚೆಗೆ ರೌಡಿಶೀಟರ್ ಗಳೆಲ್ಲಾ ಬಿಜೆಪಿಗೆ ಸೇರುತ್ತಿದ್ದಾರೆ ಎಂಬ ಆರೋಪವಿದೆ. ಕಾಂಗ್ರೆಸ್ ಬಿಜೆಪಿ ವಿರುದ್ಧ ಇದೇ ಅಸ್ತ್ರವನ್ನಿಟ್ಟುಕೊಂಡು ಕಿಡಿಕಾರಿದೆ. ಇತ್ತಿಚೆಗೆ ಬೆತ್ತನಗೆರೆ ಶಂಕರ ತನ್ನ ಹೆಸರು ಬದಲಾಯಿಸಿಕೊಂಡು ಬಿಜೆಪಿ ಸೇರಿದ್ದಾನೆ ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ. ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿಯೇ ಸೇರ್ಪಡೆ ಕಾರ್ಯಕ್ರಮವೂ ನಡೆದಿದೆ.
ಆದ್ರೆ ಈಗ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಬಿಜೆಪಿಯಿಂದ ಹೆಚ್ ಡಿ ಕೋಟೆ ಜಿಲ್ಲಾ ಪಂಚಾಯತ್ ಆಕಾಂಕ್ಷಿಯಾಗಿರುವ ಬೆತ್ತನಗೆರೆ ಶಂಕರನನ್ನು ಮೈಸೂರಿನಿಂದಾನೇ ಗಡಿಪಾರು ಮಾಡಲು ಪೊಲೀಸರು ಪ್ಲ್ಯಾನ್ ನಡೆಸುತ್ತಿದ್ದಾರೆ ಎನ್ನಲಾಗಿದೆ. ಬೆತ್ತನಗೆರೆ ಶಂಕರ ನೆಲಮಂಗಲ ಠಾಣೆಯ ರೌಡಿಶೀಟರ್ ಆಗಿದ್ದಾನೆ. ಆದರೆ ಈಗ ಮೈಸೂರಿನಲ್ಲಿ ಆಕ್ಟೀವ್ ಆಗಿದ್ದಾನೆ.
ಬೆತ್ತನಗೆರೆ ಶಂಕರ, ಕೊಲೆ, ಸುಲಿಗೆ, ಸುಪಾರಿ, ಅಕ್ರಮ ಶಸ್ತ್ರಾಸ್ತ್ರ ಸೇರಿದಂತೆ ಸುಮಾರು ಹದಿನೈದಕ್ಕೂ ಹೆಚ್ಚು ಪ್ರಕರಣಗಳು ಶಂಕರನ ಮೇಲಿದೆ. ಈಗ ರಾಜಕೀಯ ಎಂಟ್ರಿ ಪಡೆಯಲು ಮುಂದಾಗಿರುವ ಶಂಕರನ ಅವತಾರಗಳಿಗೆ ಬ್ರೇಕ್ ಹಾಕುವುದಕ್ಕೆ ಪೊಲೀಸರು ನಿರ್ಧರಿಸಿದ್ದಾರೆ. ಮೈಸೂರಿನಲ್ಲಿ ರಾಜಕೀಯಕ್ಕೆ ಎಂಟ್ರಿಕೊಡಬೇಕೆಂದುಕೊಂಡಿರುವ ಶಂಕರನನ್ನು ಅಲ್ಲಿಂದಾನೇ ಗಡಿಪಾರು ಮಾಡಲು ಪೊಲೀಸರು ಚಿಂತಿಸುತ್ತಿದ್ದಾರೆ.