ರಾಯಚೂರು: ಲವ್ ಜಿಹಾದ್ ವಿರುದ್ಧವಾಗಿ ಇತ್ತೀಚೆಗೆ ಲವ್ ಕೇಸರಿಗೆ ಶ್ರೀರಾಮ ಸೇನೆ ಕರೆಕೊಟ್ಟಿತ್ತು. ಆದರೆ ಈ ಲವ್ ಕೇಸರಿ ವಿವಾದ ಸಂಬಂಧ ಇದೀಗ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಶ್ರೀರಾಮಸೇನೆಯ ಜಿಲ್ಲಾ ಸಂಚಾಲಕ ರಾಜಾಚಂದ್ರ ರಾಮನಗೌಡ ಮತ್ತು ಜಿಲ್ಲಾಧ್ಯಕ್ಷ ಮಂಜುನಾಥ್ ಬಾವಿಯನ್ನು ಬಂಧಿಸಿದ್ದಾರೆ.
ನಗರದ ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ. ಲವ್ ಜಿಹಾದ್ ವಿರುದ್ಧವಾಗಿ ಲವ್ ಕೇಸರಿ ಬಗ್ಗೆ ಮಾತನಾಡಿದ್ದ ರಾಜಾಚಂದ್ರ ರಾಮನಗೌಡ, ಹಿಂದೂಗಳ ಮೇಲೆ ದಾಳಿ ಮಾಡಿದವರನ್ನು ಕೊಚ್ಚಿ ಹಾಕಿ ನಾನೀದ್ದೀನಿ ಎಂಬ ಹೇಳಿಕೆ ನೀಡಿದ್ದರು. ಖಡ್ಗ ಹಿಡಿದು ವೇದಿಕೆ ಮೇಲೆಯೇ ಯುವಕರ ಪ್ರಚೋದನೆ ಮಾಡಿದ್ದರು. ಈ ಆರೋಪ ಸಂಬಂಧ ಇದೀಗ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಮತೀಯ ಭಾವನೆಗಳಿಗೆ ಧಕ್ಕೆಯುಂಟು ಮಾಡುವಂತ ಭಾಷಣ ಮಾಡಿ, ಅನ್ಯ ಧರ್ಮಿಯರಲ್ಲಿ ಭಯ ಹುಟ್ಟಿಸುವಂತ ಕಾರ್ಯಕ್ರಮ ಮಾಡಿದ್ದಾರೆಂದು ಆರೋಪಿಸಿ ದೂರು ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಗೋವಾದಲ್ಲಿ ಬಂಧಿಸಿದ್ದಾರೆ. ವುಚಾರಣೆ ಬಳಿಕ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.