ಬೆಂಗಳೂರು: ಐದು ಕೆಜಿ ಚಿನ್ನದ ಗಟ್ಟಿ ಸುಲಿಗೆ ಮಾಡಿದ್ದ ಗ್ಯಾಂಗ್ ಅನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಹಲಸೂರು ಗೇಟ್ ಪೊಲೀಸರಿಂದ ಏಳು ಜನರ ಗ್ಯಾಂಗ್ ಬಂಧನವಾಗಿದೆ. ನವೆಂಬರ್ 19 ರಂದು ಸಿದ್ದೇಶ್ವರ್ ಶಿಂದೆ ಎಂಬುವರ ಬಳಿ ಸುಲಿಗೆ ಮಾಡಿದ್ದರು.
ಸಿದ್ದೇಶ್ವರ್ ಎಂಬುವವರುಅಟ್ಟಿಕಾ ಗೋಲ್ಡ್ ನಲ್ಲಿ ಚಿನ್ನ ಖರೀದಿ ಮಾಡಿ ತೆರಳುತ್ತಿದ್ದರು. ಸಿದ್ದೇಶ್ವರದ ದ್ವಿಚಕ್ರ ವಾಹನದಲ್ಲಿ ಚಿನ್ನ ತೆಗೆದುಕೊಂಡು ಹೋಗ್ತಿದ್ದರು. ಸಿದ್ದೇಶ್ವರ್ ಪಾಲೋ ಮಾಡಿದ್ದರು. ಹಲಸೂರು ಗೇಟ್ ರಾಜ್ ಹೊಟೇಲ್ ಬಳಿ ತಲುಪುತ್ತಿದ್ದಂತೆ ಈ ಗ್ಯಾಂಗ್ ಮಚ್ಚು ತೋರಿಸಿ ಚಿನ್ನ ದೋಚಿದ್ದರು.
ತಕ್ಷಣ ಸಿದ್ದೇಶ್ವರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಟ್ಟಿಕಾ ಗೋಲ್ಡ್ ಸೆಕ್ಯೂರಿಟಿ ಕೊಟ್ಟ ಸುಳಿವಿನ ಮೇರೆಗೆ ಹಲಸೂರು ಪೊಲೀಸರು ಆ ಖದೀಮರನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಚಿನ್ನ ದೋಚಿದ ಏಳು ಮಂದಿಯನ್ನ ಬಂಧಿಸಿದ್ದಾರೆ. ಬಂಧಿತರಿಂದ 2.56 ಲಕ್ಷ ಮೌಲ್ಯದ 4 ಕೆಜಿ 984 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ.