ರೆಬೆಲ್ ಸ್ಟಾರ್ ಪುತ್ರ ಬೀಗರೂಟದಲ್ಲಿ ಗಲಾಟೆ : ಪೊಲೀಸರು ಪರಿಸ್ಥಿತಿ ನಿಭಾಯಿಸಲು ಹರಸಾಹಸ..!

suddionenews
1 Min Read

ಇಂದು ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದಪ್ಪ ಅವರ ಬೀಗರೂಟದ ಕಾರ್ಯಕ್ರಮವಿತ್ತು. ಮಂಡ್ಯ ಜಿಲ್ಲೆಯ ಗೆಜ್ಜಲಗೆರೆಯಲ್ಲಿ ಬೀಗರೂಟಕ್ಕೆ ಏರ್ಪಾಡು ಮಾಡಲಾಗಿತ್ತು. 15 ಎಕರೆ ಜಾಗದಲ್ಲಿ ಔತಣಕೂಟಕ್ಕೆ ಸಿದ್ದತೆ ಮಾಡಿಕೊಂಡಿದ್ದರು. ಎಲ್ಲಾ ಅಭಿಮಾನಿಗಳಿಗೂ ಆಹ್ವಾನ ನೀಡಿದ್ದರು. ಜನಸಾಗರದಿಂದ ಸಾಕಷ್ಟು ಸಮಸ್ಯೆ ಉಂಟಾಗಿದೆ. ನೂಕು ನುಗ್ಗಲಾಗಿದೆ.

ಮಂಡ್ಯದ ಸೊಸೆಯನ್ನು ನೋಡುವುದಕ್ಕೆ ಜನ ನುಗ್ಗಿ ನುಗ್ಗಿ ಬಂದರು. ಊಟದ ಕುರ್ಚಿಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು. ಊಟವೆಲ್ಲಾ ನೆಲದ ಮೇಲೆ ಬಿದ್ದಿತ್ತು. ಬೀಗರೂಟಕ್ಕೆ ಏನಿಲ್ಲಾ ಅಂದ್ರು ಸುಮಾರು 40 ಸಾವಿರ ಜನ ಬಂದಿದ್ರು ಎನ್ನಲಾಗ್ತಾ ಇದೆ. ಆ ಕಡೆ ಅಂಬಿಗೆ ಇಷ್ಡವಾದ ಆಹಾರವನ್ನೇ ಮಾಡಿಸಲಾಗಿತ್ತು.

ಇಷ್ಟು ಜನ ಸೇರಿದ್ದು, ಪೊಲೀಸರಿಗಂತು ಹರಸಾಹಸವೇ ಆಗಿ ಹೋಯ್ತು. ಜನರ ನೂಕು ನುಗ್ಗಲು ತಡೆಯಲು ಪೊಲೀಸರು ಸಾಕಷ್ಟು ಕಷ್ಟಪಟ್ಟಿದ್ದಾರೆ. ನಿಯಂತ್ರಿಸಲು ಕಷ್ಟವಾದಾಗ ಲಾಠಿಚಾರ್ಜ್ ಮಾಡಿದ್ದಾರೆ. ಬ್ಯಾರಿಕೇಡ್ ಗಳನ್ನು ತಳ್ಳಿ ಜನ ಬಂದಿದ್ದಾರೆ. ಬೀಗರೂಟದಲ್ಲಿ ಸಾಕಷ್ಟು ಜನಜಾತ್ರೆ ನೆರೆದಿದ್ದರಿಂದ ಪೊಲೀಸರಿಗೆ ತುಂಬಾನೇ ಕಷ್ಟವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *