ಸದ್ಯ ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಎಷ್ಟು ಬೇಗ ನಮ್ಮ ದೇಶ ತಲುಪುತ್ತೇವೋ ಎಂಬ ಆತಂಕದಲ್ಲಿದ್ದಾರೆ. ಯುದ್ಧದ ತೀವ್ರತೆ ಹೆಚ್ಚಾಗುತ್ತಲೇ ಇದೆ. ನಾಲ್ಕನೇ ದಿನದ ಈ ಯುದ್ದದಿಂದ ಸಾಕಷ್ಟು ಜನರ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ರಷ್ಯಾ ಉಕ್ರೇನ್ ನ ಹಲವು ಪ್ರದೇಶಗಳನ್ನ ವಶಪಡಿಸಿಕೊಂಡಿದೆ. ಈ ಮಧ್ಯೆ ಅಲ್ಲಿರುವ ಭಾರತೀಯರನ್ನ ಕರೆತರುವಲ್ಲಿ ನಿರತವಾಗಿದೆ.
ಆಪರೇಷನ್ ಗಂಗಾ ಯೋಜನೆ ಮೂಲಕ 4ನೇ ವಿಮಾನ ನಿಲ್ದಾಣ ಭಾರತಕ್ಕೆ ಬಂದಿದೆ. 198 ಮಂದಿ ಭಾರತೀಯರನ್ನ ರೋಮಾನಿಯಾದ ಬುಕಾರೆಸ್ಟ್ ನಿಂದ ಏರ್ ಲಿಫ್ಟ್ ಮಾಡಲಾಗಿದೆ. ಯುದ್ಧ ಭೀತಿಯಲ್ಲಿರುವ ವಿದ್ಯಾರ್ಥಿಗಳು ಆದಷ್ಟು ಉಕ್ರೇನ್ ನಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಪೋಲಾಂಡ್ ಸರ್ಕಾರ ಹಾಗೇ ಬಂದವರನ್ನ ವೀಸಾ ಕೇಳದೆ ಮಾನವೀಯ ನಿಲುವು ತಾಳಿದೆ.
Poland is allowing to enter without any visa all Indian students who escape from Russian aggression in Ukraine.
— Adam Burakowski (@Adam_Burakowski) February 27, 2022
ಉಕ್ರೇನ್ ನಿಂದ ತಪ್ಪಿಸಿಕೊಂಡು ಬಾರ್ಡರ್ ಗೆ ಬರುತ್ತಿರುವ ವಿದ್ಯಾರ್ಥಿಗಳಿಗೆ ಪೋಲಾಂಡ್ ಸರ್ಕಾರ ವೀಸಾ ಇಲ್ಲದೆ ಇದ್ದರು ಭಾರತೀಯ ವಿದ್ಯಾರ್ಥಿಗಳನ್ನ ದೇಶದ ಒಳಗೆ ಬಿಟ್ಟುಕೊಳ್ಳುತ್ತಿದೆ.