Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಪದ್ಯಗಳಲ್ಲಿ ಸಂಗೀತದ ಜೊತೆಗೆ ಸಂದೇಶ ಅಗತ್ಯ : ಡಾ. ಬಿ.ರಾಜಶೇಖರಪ್ಪ

---Advertisement---

ಸುದ್ದಿಒನ್, ಜೂನ್. 17 : ಮಕ್ಕಳ ಪದ್ಯಗಳಲ್ಲಿ ಸಂಗೀತದ ಜೊತೆಗೆ ಸಂದೇಶವನ್ನು ನೀಡುವುದು ಅಗತ್ಯ ಎಂದು ಇತಿಹಾಸ ತಜ್ಞ ಡಾ. ಬಿ.ರಾಜಶೇಖರಪ್ಪ ಹೇಳಿದರು.

ಅವರು ಮಂಗಳವಾರ ನಗರದ ಬಾಪೂಜಿ ಸಮೂಹ ಸಂಸ್ಥೆಗಳ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶರಣ ಸಾಹಿತ್ಯ ಪರಿಷತ್ತುಗಳ ವತಿಯಿಂದ ಏರ್ಪಡಿಸಿದ್ದ ಕೆ. ನಿರ್ಮಲ ಮರಡಿಹಳ್ಳಿಯವರು ರಚಿಸಿದ ಬೆಳ್ಳಕ್ಕಿ ಸಾಲು ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ನಿರಂತರವಾಗಿ ಪುಸ್ತಕಗಳು ಬಿಡುಗಡೆಯಾಗುತ್ತಿರುವುದು ಉತ್ತಮ ಸಂಗತಿಯಾಗಿದೆ, ಇತಿಹಾಸ, ಕಥೆ, ಕವನಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಕೆ. ನಿರ್ಮಲ ರವರು ಮಕ್ಕಳನ್ನು ತಲುಪು ಉತ್ತಮ ಕವನಗಳನ್ನು ರಚಿಸಿದ್ದಾರೆ. ಮಕ್ಕಳ ಪದ್ಯಗಳಿಗೆ ಸುಧೀರ್ಘ ಇತಿಹಾಸವಿದೆ. ಈಸೋಪನ ನೀತಿ ಕಥೆಗಳು, ಕಥಾ ಸರಿತ್ಸಾಗರ, ಪಂಚತಂತ್ರದ ಕಥೆಗಳು ಸೇರಿದಂತೆ ನಾನಾ ಕಥೆಗಳು ಮತ್ತು ಕವನಗಳನ್ನು ಬರೆದಿದ್ದಾರೆ. ಚಂದಿರನೇತಕೆ ಓಡುವನಮ್ಮ ಎಂಬ ಕುವೆಂಪು ರವರ ಮಕ್ಕಳ ಪದ್ಯ ಅತ್ಯಂತ ಜನಪ್ರಿಯವಾಗಿದೆ. ಕುವೆಂಪು ತಮ್ಮ ಕಿಂದರಿ ಜೋಗಿ ಪದ್ಯವನ್ನು ಇಂಗ್ಲೀಷ್ ನಿಂದ ಭಾಷಾಂತರ ಮಾಡಿರುವುದರ ಜೊತೆಗೆ ಅನುಸೃಷ್ಟಿಸಿ ಕನ್ನಡ ಮಣ್ಣಿನ ನೆಲಗಟ್ಟನ್ನು ಇದರಲ್ಲಿ ತಂದಿದ್ದಾರೆ. ಜೆ.ಪಿ.ರಾಜರತ್ನಂ ರವರ ನಾಯಿಮರಿ ನಾಯಿಮರಿ ತಿಂಡಿ ಬೇಕೆ , ಒಂದು ಎರಡು, ಬಾಳೆಲೆ ಹರಡು ಸೇರಿದಂತೆ ಹಲವಾರು ಪದ್ಯಗಳು ಇಂದಿಗೂ ಮಕ್ಕಳು ಮತ್ತು ದೊಡ್ಡವರ ಮನಗಳಲ್ಲಿ ನೆಲೆಸಿವೆ.
ಮಕ್ಕಳ ಪದ್ಯಗಳು ಸಂಗೀತ, ವಿನೋದ, ಸಂದೇಶ ಮತ್ತು ಸಂಸ್ಕಾರದ ಗುಣಗಳನ್ನು ಹೊಂದಿರಬೇಕು. ಹೀಗಾದಲ್ಲಿ ಮಾತ್ರ ಪದ್ಯಗಳು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಕವಯತ್ರಿ ನಿರ್ಮಲ ರವರು ಪ್ರಾಸ, ಅನುಕರಣವ್ಯಯಗಳು ಸೇರಿದಂತೆ ನಾನಾ ಪ್ರಯೋಗಗಳನ್ನು ಬಳಸಿ ಉತ್ತಮ ಕವನಗಳನ್ನು ರಚಿಸಿದ್ದಾರೆ. ಇದು ಲೇಖಕಿಯ ಗಟ್ಟಿತನವನ್ನು ಸೂಚಿಸುತ್ತದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಮಾತನಾಡಿ, ಮಕ್ಕಳ ಬಗ್ಗೆ ಆದ್ಯತೆ ವಿಷಯವನ್ನಾಗಿ ಹೊಂದಿ ಕವನ ಸಂಕಲನ ರಚಿಸಿರುವುದು ವಿಶೇಷವಾಗಿದೆ. ಮಕ್ಕಳ ಬಗ್ಗೆ ಆಸಕ್ತಿ ಮತ್ತು ಅನುಭವ ಹೊಂದಿದ್ದವರು ಮಾತ್ರ ಇಂಥಹ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿದೆ. ಇದೊಂದು ಉತ್ತಮ ಪ್ರಯತ್ನವಾಗಿದೆ. ವಿದ್ಯಾರ್ಥಿಗಳು ಇಂಥಹ ಹಾಡುಗಳನ್ನು ಹೇಳುವುದರ ಜೊತೆಗೆ ಸಂದೇಶವನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಬಾಪೂಜಿ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವೀರೇಶ್ ಮಾತನಾಡಿ, ಶಿಕ್ಷಕಿಯಾಗಿರುವ ನಿರ್ಮಲ ರವರು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು ಅವರ ಭವಿಷ್ಯವನ್ನು ಉತ್ತಮ ಪಡಿಸಲು ಕವನ ಸಂಕಲನ ರಚಿಸಿದ್ದಾರೆ. ಮಕ್ಕಳಿಗೆ ಸಂತೋಷ ಜ್ಞಾನ ಮತ್ತು ಜೀವನ ಸಂದೇಶವನ್ನು ಪದ್ಯಗಳು ನೀಡುತ್ತಿವೆ. ಸಾಹಿತ್ಯ ಮತ್ತು ಸಂಸ್ಕøತಿಯ ಕಾರ್ಯಕ್ರಮಗಳಿಗೆ ಸಂಸ್ಥೆಯು ಸದಾ ಸಹಕಾರ ನೀಡುತ್ತಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಕನ್ನಡದಲ್ಲಿ ಸ್ವಷ್ಟವಾಗಿ ಓದುವ, ಬರೆಯುವ ಮತ್ತು ಮಾತನಾಡುವ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಲೇಖಕರು ಮತ್ತು ಕವಿಗಳಿಗೆ ಪರಿಷತ್ತು ನಿರಂತರವಾಗಿ ಸಹಕಾರ ನೀಡುತ್ತಿದೆ ಎಂದು ಹೇಳಿದರು.

ಸಾಹಿತಿ ಜಿ.ಎಸ್.ಉಜ್ಜಿನಪ್ಪ ಮತ್ತು ಸಾಹಿತಿ ನಿರ್ಮಲ ಮರಡಿಹಳ್ಳಿ ಮಾತನಾಡಿದರು. ಮಕ್ಕಳ ಸಾಹಿತಿ ಪರಮೇಶ್ವರಪ್ಪ ಕುದುರಿ, ಬಿ.ಇಡಿ. ಕಾಲೇಜು ಪ್ರಾಚಾರ್ಯೆ ಜಯಲಕ್ಷ್ಮಿ, ವಿ.ಶ್ರೀನಿವಾಸ ಮಳಲಿ, ಚೌಳೂರು ಲೋಕೇಶ, ಕೆ.ಜಿ. ಅಜಯ್ ಕುಮಾರ್, ಕೆ.ಪಿ.ಎಂ.ಗಣೇಶಯ್ಯ, ಚಂದ್ರಿಕ, ರೀನಾವೀರಭದ್ರಪ್ಪ ಮತ್ತಿತರರಿದ್ದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...