ಪೋಕ್ಸೋ ಕಾಯ್ದೆ : ಠಾಣೆಯಲ್ಲಿ ಅರಾಜಕತೆ : ಬಾಲಕಿಯ ವಿವಸ್ತ್ರಗೊಳಿಸಿ ಫೋಟೋ ತೆಗೆದ ಎಎಸ್‌ಐ

 

ಸುದ್ದಿಒನ್

ಪೊಲೀಸ್ ಠಾಣೆಗೆ ಬಂದಿದ್ದ ಬಾಲಕಿಯ ಮೇಲೆ ಎಎಸ್‌ಐ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆಕೆಯನ್ನು ರಕ್ಷಿಸಬೇಕಿದ್ದ ಪೊಲೀಸ್ ಅಸಭ್ಯವಾಗಿ ವರ್ತಿಸಿದ್ದಾನೆ. ಬಾಲಕಿಯ ಮೇಲೆ ಕಣ್ಣಿಟ್ಟಿದ್ದ ಎಎಸ್‌ಐ ಠಾಣೆಯಲ್ಲೇ ವಿಕೃತಿ ಮೆರೆದಿದ್ದಾನೆ.

ಎಎಸ್‌ಐ ವರ್ತನೆಯಿಂದ ಬೇಸತ್ತ ಬಾಲಕಿ ಮೇಲಧಿಕಾರಿಗಳಿಗೆ ದೂರು ನೀಡಿದ್ದಾಳೆ. ಇದರೊಂದಿಗೆ ಎಸ್‌ಎಸ್‌ಐ ಪರಾರಿಯಾಗಿದ್ದಾನೆ. ಬಾಲಕಿಯ ದೂರಿನ ಮೇರೆಗೆ ಪೊಲೀಸರು ಎಎಸ್‌ಐ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ಎಸ್‌ಎಸ್‌ಐ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ. ಇಂತಹ ಭೀಕರ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಏನಾಯಿತು ?

ಅಸ್ಸಾಂನ ನಲ್ಬರಿ ಜಿಲ್ಲೆಯ ಘೋಗ್ರಾಪರ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.  ಜೂನ್ 21 ರಂದು 17 ವರ್ಷದ ಯುವತಿ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆಂದು ಆಕೆಯ ಕುಟುಂಬ ಸದಸ್ಯರು ಘೋಗ್ರಾಪರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ನಂತರ ಘೋಗ್ರಾಪರ್ ಠಾಣೆಗೆ ಕರೆದೊಯ್ದು ಬಾಲ್ಯವಿವಾಹ ಪ್ರಕರಣ ದಾಖಲಿಸಲಾಗಿದೆ.
ಈ ವೇಳೆ, ಘೋಗ್ರಾಪರ್ ಎಎಸ್‌ಐ ಭಿಮನ್ ರಾಯ್ ತಮ್ಮ ವಶದಲ್ಲಿದ್ದ ಹುಡುಗಿಯ ಮೇಲೆ ಅಸಭ್ಯವಾಗಿ ವರ್ತಿಸಿ ಅಶ್ಲೀಲ ಕೃತ್ಯಗಳನ್ನು ಎಸಗಿದ್ದಾನೆ. ಆಕೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾಗ ಆಕೆಯನ್ನು ವಿವಸ್ತ್ರಗೊಳಿಸಿದ್ದಾನೆ. ಬಳಿಕ ಆಕ್ಷೇಪಾರ್ಹ ಫೋಟೋಗಳನ್ನು ತೆಗೆದಿದ್ದಾನೆ.

ನಂತರ ಬಾಲಕಿ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾಳೆ. ಎಎಸ್‌ಐ ಭಿಮನ್ ರಾಯ್ ಅವರು ಪೊಲೀಸ್ ಠಾಣೆಯಲ್ಲಿ ತನಗೆ ಬೆದರಿಕೆ ಹಾಕಿದರು ಮತ್ತು ಬಟ್ಟೆ ತೆಗೆಯುವಂತೆ ಒತ್ತಾಯಿಸಿದರು. ಎಸ್‌ಎಸ್‌ಐ ತನ್ನೊಂದಿಗೆ ಅನುಚಿತವಾಗಿ ವರ್ತಿಸಿ ನನ್ನನ್ನು ವಿವಸ್ತ್ರಗೊಳಿಸಿ ಛಾಯಾಚಿತ್ರ ತೆಗೆದಿದ್ದಾರೆ ಎಂದು ದೂರಿದ್ದಾಳೆ.

ಪ್ರತಿಕ್ರಿಯಿಸಿದ ಡಿಜಿಪಿ

ಈ ಘಟನೆ ಬಗ್ಗೆ ಅಸ್ಸಾಂ ಡಿಜಿಪಿ ಜಿಪಿ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಪ್ರಕರಣದ ವಿವರಗಳನ್ನು ಶುಕ್ರವಾರ ಮಾಧ್ಯಮಗಳಿಗೆ ಬಹಿರಂಗಪಡಿಸಲಾಗಿದೆ. ನಲ್ಬರಿ ಜಿಲ್ಲೆಯ ಘೋಗ್ರಾಪರ್ ಪೊಲೀಸ್ ಠಾಣೆಯಲ್ಲಿ 17 ವರ್ಷದ ಬಾಲಕಿಯ ಮೇಲೆ ಸಬ್ ಇನ್ಸ್‌ಪೆಕ್ಟರ್ ಬಿಮನ್ ರಾಯ್ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು  ಹೇಳಿದ್ದಾರೆ.

ತನಿಖೆ ನಡೆಸಿ ಇನ್ಸ್ ಪೆಕ್ಟರ್ ನನ್ನು ಅಮಾನತುಗೊಳಿಸಲಾಗಿದೆ ಎಂದು ಡಿಜಿಪಿ ಜಿಪಿ ಸಿಂಗ್ ತಿಳಿಸಿದ್ದಾರೆ. ಸದ್ಯ ಆರೋಪಿ ಎಎಸ್‌ಐ ಬಿಮನ್ ರಾಯ್ ತಲೆಮರೆಸಿಕೊಂಡಿದ್ದಾನೆ. ಬಿಮನ್ ರಾಯ್ ಇರುವ ಸ್ಥಳವನ್ನು ಬಹಿರಂಗಪಡಿಸಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಡಿಜಿಪಿ ಟ್ವೀಟ್ ಮಾಡಿದ್ದಾರೆ.

ಎಸ್ಪಿ ಪ್ರತಿಕ್ರಿಯೆ

ಮತ್ತೊಂದೆಡೆ ಅಪ್ರಾಪ್ತರನ್ನು ಸ್ಟೇಟ್ ಹೋಮ್ ಬದಲಿಗೆ ಪೊಲೀಸ್ ಠಾಣೆಯಲ್ಲೇ ಇರಿಸಿರುವುದು ಪೊಲೀಸರ ತಪ್ಪು ಎಂದು ನಲ್ಬರಿ ಜಿಲ್ಲಾ ಎಸ್ಪಿ ಹೇಳಿದ್ದಾರೆ. ಅಪ್ರಾಪ್ತರ ವಿಷಯದಲ್ಲಿ ಕೆಲವು ಸೂಚನೆಗಳು ಮತ್ತು ನಿಯಮಗಳು ಜಾರಿಯಲ್ಲಿದ್ದು, ಎಲ್ಲಾ ಪೊಲೀಸರು ಅದನ್ನು ಪಾಲಿಸಬೇಕು.  ಅಪ್ರಾಪ್ತರನ್ನು ಪೊಲೀಸ್ ಠಾಣೆಯಲ್ಲಿ ಇಡಬಾರದು.ಹಾಗೆ ಮಾಡುವವರ ವಿರುದ್ಧ ಕಾನೂನು ಮತ್ತು ಇಲಾಖಾ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಾಲಕಿಯನ್ನು ಸ್ಟೇಟ್‌ ಹೋಮ್‌ನಲ್ಲಿ ಇರಿಸಲಾಗಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *