ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಮೇ.01) : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧವಾಗಿ ಪ್ರಧಾನಮಂತ್ರಿಗಳು ಮೇ. 02ರಂದು ಪಕ್ಷದ ವತಿಯಿಂದ ಚಿತ್ರದುರ್ಗ ನಗರದ ಶ್ರೀ ಮುರುಘಾರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಆವರಣ)ದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಚಿತ್ರದುರ್ಗ ನಗರಕ್ಕೆ ಭೇಟಿ ನೀಡಲಿದ್ದು,
ಈ ಸಂಬಂಧವಾಗಿ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಆದೇಶ ಹೊರಡಿಸಿದ್ದಾರೆ.
ಪ್ರಧಾನಮಂತ್ರಿಗಳು “z+” ವರ್ಗದ ಎಸ್.ಜಿ.ಪಿ ಭದ್ರತೆಯಲ್ಲಿ ಬರುವುದರಿಂದ ಪ್ರವಾಸ ಕಾಲದಲ್ಲಿ ಸುಗಮ ಸಂಚಾರ ಸಂಬಂಧವಾಗಿ ಮೇ.2ರಂದು ಒನಕೆ ಓಬವ್ವ ಸ್ಟೇಡಿಯಂನಿಂದ ಜಿಲ್ಲಾ ಪಂಚಾಯಿತಿ ಕಚೇರಿಯ ಮುಂಭಾಗದ ರಸ್ತೆಯನ್ನು ಬಳಸಿಕೊಂಡು ಮುರುಘರಾಜೇಂದ್ರ ಕ್ರೀಡಾಂಗಣಕ್ಕೆ ಹೋಗುವ ರಸ್ತೆಯಲ್ಲಿನ ಮತ್ತು ಒನಕೆ ಓಬವ್ವ ಸ್ಟೇಡಿಯಂನಿಂದ ಬಿ.ಡಿ.ರಸ್ತೆಯ ಮುಖಾಂತರ ಮುರುಘರಾಜೇಂದ್ರ ಕ್ರೀಡಾಂಗಣಕ್ಕೆ ಹೋಗುವ ರಸ್ತೆಯಲ್ಲಿನ ಎಲ್ಲಾ ಬಗೆಯ ವಾಹನ ಮತ್ತು ಜನ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಆದೇಶಿಸಿದ್ದಾರೆ.





GIPHY App Key not set. Please check settings