ನವದೆಹಲಿ: ಹ್ಯಾಕರ್ಸ್ ಗಳ ಕಣ್ಣು ಸೆಲೆಬ್ರೆಟಿ ಟ್ವಿಟ್ಟರ್ ಗಳ ಮೇಲಷ್ಟೇ ಇತ್ತು. ಆದ್ರೀಗ ಇದ್ದಕ್ಕಿದ್ದ ಹಾಗೇ ಪ್ರಧಾನಿ ಮೋದಿಯವರ ಟ್ವಿಟ್ಟರ್ ಮೇಲೆ ಕಣ್ಣಾಕಿದ್ದು, ಹ್ಯಾಕ್ ಮಾಡಿದ್ದಾರೆ. ಅದರಲ್ಲೂ ಬೆಳಗಿನ ಜಾವ ಹ್ಯಾಕ್ ಮಾಡಿದ್ದಾರೆ.
ಈ ಬಗ್ಗೆ ಪಿಎಂಒ ತನ್ನ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದೆ. ಭಾನುವಾರ ರಾತ್ರಿ 2 ಗಂಟೆಯ ವೇಳೆಗೆ ಹ್ಯಾಕರ್ಸ್ ಗಳು ಹ್ಯಾಕ್ ಮಾಡಿದ್ದಾರೆ. 3 ಗಂಟೆಗೆ ಪಿಎಂಒ ಈ ಸಂಬಂಧ ಟ್ವೀಟ್ ಮಾಡಿ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಹ್ಯಾಕ್ ಮಾಡಿದ ಬಳಿಕ ಕ್ರಿಪ್ಟೋ ಕರೆನ್ಸಿ ಬಗ್ಗೆ ಫೊಸ್ಟ್ ಹಾಕಲಾಗಿದೆ. ಅದರಲ್ಲಿ ಬಿಟ್ ಕಾಯಿನ್ ಅನ್ನು ಸರ್ಕಾರ ಅಧಿಕೃತಗೊಳಿಸಿದೆ. ಸರ್ಕಾರ 500 ಬಿಟಿಸಿಗಳನ್ನ ಖರೀದಿ ಮಾಡಿದೆ. ದೇಶದಲ್ಲಿರೋ ಜನರಿಗೆ ಸರ್ಕಾರ ಹಂಚಿಕೆ ಮಾಡಲಿದೆ. ಸರ್ಕಾರ ಬಿಟ್ ಕಾಯಿನ್ ಟೆಂಡರ್ ಕರೆದಿದೆ ಎಂದು ಪೋಸ್ಟ್ ಮಾಡಲಾಗಿದೆ.
ಈ ಸಂಬಂಧ ಪಿಎಂಒ ಟ್ವೀಟ್ ಮಾಡಿ ಹ್ಯಾಕರ್ಸ್ ಗಳು ಮಾಡಿರುವ ಟ್ವೀಟ್ ಅನ್ನ ಪರಿಗಣನೆಗೆ ತೆಗೆದುಕೊಳ್ಳಬೇಡಿ ಎಂದು ತಿಳಿಸಿದೆ. ಸದ್ಯ ಆ ಬಿಟ್ ಕಾಯಿನ್ ಸಂಬಂಧದ ಟ್ವೀಟ್ ಡಿಲೀಟ್ ಆಗಿದೆ.