Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಮ್ಮ ನಾರಿ ಶಕ್ತಿ ನಮಗೆ ಸ್ಪೂರ್ತಿ : ಓಬವ್ವ ಜಯಂತಿಗೆ ಪ್ರಧಾನಿ ಕನ್ನಡದಲ್ಲೇ ಟ್ವೀಟ್

Facebook
Twitter
Telegram
WhatsApp

ಬೆಂಗಳೂರು: ಇಂದು ಎಲ್ಲೆಡೆ ಒನಕೆ ಓಬವ್ವ ಜಯಂತಿಯನ್ನ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಪ್ರಧಾನಿ ಮೋದಿ ಕೂಡ ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಒನಕೆ ಓಬವ್ವನ ಬಗ್ಗೆ ಬರೆದಿದ್ದಾರೆ.

ವೀರವನಿತೆ ಒನಕೆ ಓಬವ್ವ ಜಯಂತಿಯ ವಿಶೇಷ ಸಂದರ್ಭದಲ್ಲಿ ಅವರಿಗೆ ನಮನ ಸಲ್ಲಿಸುತ್ತೇನೆ. ತನ್ನ ಜನರು ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಅವರು ತೋರಿದ ಧೈರ್ಯವನ್ನು ಎಂದಿಗೂ ಯಾರೊಬ್ಬರೂ ಮರೆಯಲು ಸಾಧ್ಯವಿಲ್ಲ. ಅವರು ನಮ್ಮ ನಾರಿ ಶಕ್ತಿಯ ಪ್ರತೀಕವಾಗಿ ನಮಗೆ ಸ್ಫೂರ್ತಿ ನೀಡುತ್ತಾರೆ ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

ಒನಕೆ ಓಬವ್ವ 18 ನೇ ಶತಮಾನದ ವೀರ ಮಹಿಳೆ. ಚಿತ್ರದುರ್ಗ ಕೋಟೆಯ ಪಾಳೇಗಾರ ವೀರಮದಕರಿ‌ ನಾಯಕನ ಕೋಟೆ ಕಾವಲುಗಾರನಾಗಿದ್ದ ಕಹಳೆ ಮುದ್ದಹನುಮಪ್ಪನ ಹೆಂಡತಿ. ಶತ್ರುಗಳು ಕೋಟೆಯೊಳಗೆ ನುಗ್ಗುವಾಗ, ಮುದ್ದಹನುಮಪ್ಪ ಊಟ ಮಾಡುತ್ತಿದ್ದರು. ಊಟದ ಮಧ್ಯೆ ಏಳಿಸಬಾರದರಂದು ತಾನೇ ಒನಕೆ ಹಿಡಿದು ಶತ್ರುಗಳನ್ನ ಸದೆ ಬಡಿದ ವೀರ ವನಿತೆ.

ಹೀಗಾಗಿ ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕವೆಂದು ನಾಮಕರಣ ಮಾಡಿದ ಬೆನ್ನಲ್ಲೇ ನವೆಂಬರ್ 11ರಂದು ಒನಕೆ ಓಬವ್ವ ಜಯಂತಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಇಂದು ಎಲ್ಲೆಡೆ ಒನಕೆ ಓಬವ್ವನ ಸಾಹಸ ನೆನೆದು, ಆ ವೀರ ವನಿತೆಗೆ ನಮನ ಸಲ್ಲಿಸುತ್ತಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗದಲ್ಲಿ‌ ಆರಂಭಗೊಂಡ ಮತದಾನ ಪ್ರಕ್ರಿಯೆ : ಬೆಳ್ಳಂಬೆಳಿಗ್ಗೆಯೇ ಸಾಲುಗಟ್ಟಿ ನಿಂತ ಮತದಾರರು

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ದೇಶದಾದ್ಯಂತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭವಾಗಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭವಾಗಿದೆ. ಚಿತ್ರದುರ್ಗ ನಗರದ ವಿಪಿ ಬಡಾವಣೆಯ

ಮತ ಚಲಾಯಿಸಲು ಯಾವ ದಾಖಲೆಗಳು ಬೇಕು ? ಇಲ್ಲಿದೆ ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ :  ಮತದಾನ ಮಾಡಲು ಮತದಾರನು ಎಪಿಕ್ (ಆಧಾರ್) ಕಾರ್ಡ್ ಇಲ್ಲವೆಂದು ಚಿಂತಿಸಬೇಕಿಲ್ಲಾ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಯಾವೊಬ್ಬ ಮತದಾರನು ಮತದಾನದಿಂದ ವಂಚಿತರಾಗಬಾರದು ಎಂಬ ದೃಷ್ಠಿಯಿಂದ ಚುನಾವಣಾ ಆಯೋಗವು ಎಪಿಕ್ ಕಾರ್ಡ್ ಹೊರತುಪಡಿಸಿ 12

ರಾತ್ರಿ ಮಲಗುವ ಮುನ್ನ ಈ ಚಿಕ್ಕ ಕೆಲಸ ಮಾಡಿದರೆ, ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗ ಗೊತ್ತಾ ?

ಸುದ್ದಿಒನ್ : ಯಾಂತ್ರಿಕ ಓಟದ ಬದುಕಿನಲ್ಲಿ ಹಲವು ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಹೀಗಾಗಿ ಆರೋಗ್ಯವಂತರಾಗಿರಲು ಈಗಿನಿಂದಲೇ ಹೆಜ್ಜೆ ಇಡಬೇಕು. ಮತ್ತು ಹೆಚ್ಚು ಗಮನ ಕೊಡಬೇಕು. ಜೀವನಶೈಲಿ, ಆಹಾರ ಪದ್ಧತಿ ಬದಲಿಸಿಕೊಳ್ಳಿ ಎಂದು ವೈದ್ಯಕೀಯ ತಜ್ಞರು

error: Content is protected !!