ನಾಳೆಯಿಂದ ಏರ್ ಶೋ : ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ..!

ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿರುವಾಗಲೇ ಕೇಂದ್ರ ನಾಯಕರು ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ. ಇತ್ತಿಚೆಗಷ್ಟೇ ರಾಜ್ಯಕ್ಕೆ ಭೇಟಿ ನೀಡಿ, HAL ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಿ, ಹಿಂತಿರುಗಿದ್ದ ಪ್ರಧಾನಿ ಮೋದಿ ಇದೀಗ ಮತ್ತೆ ರಾಜ್ಯಕ್ಕೆ ಬಂದಿಳಿದಿದ್ದಾರೆ. ನಾಳೆಯಿಮನದ ಏರ್ ಶೋ 2023 ಆರಂಭವಾಗಲಿದ್ದು, ಮೋದಿಯವರಿಂದ ಉದ್ಘಾಟನೆಯಾಗಲಿದೆ.

ಈಗಾಗಲೇ ಬೆಂಗಳೂರಿಗೆ ಬಂದಿರುವ ಪ್ರಧಾನಿಯನ್ನು ರಾಜ್ಯಪಾಲರಾದ ಥಾವ್ ಚಂದ್ ಗೆಹ್ಲೋಟ್, ಸಿಎಂ ಬಸವರಾಹ್ ಬೊಮ್ಮಾಯಿ ಸೇರಿದಂತೆ ಗಣ್ಯರು ಸ್ವಾಗತಿಸಿದ್ದಾರೆ. ನಾಳೆ ಬೆಳಗ್ಗೆ ಯಲಹಂಕದಲ್ಲಿ ನಡೆಯುವ ಏರ್ ಶೋ ಉದ್ಘಾಟನೆ ಮಾಡಲಿದ್ದಾರೆ. ನಾಳೆ ಬೆಳಗ್ಗೆ ರಾಜಭವನದಿಂದ ಹೊರಡುವ ಪ್ರಧಾನಿ ಮೋದಿ 9.30ಯಿಂದ 11.30 ಒಳಗೆ ಉದ್ಘಾಟನಾ ಕಾರ್ಯ ಮುಗಿಸಲಿದ್ದಾರೆ.

ಹೆಲಿಕಾಪ್ಟರ್ ಮೂಲಕ ಯಲಹಂಕಕ್ಕೆ ತೆರಳಲಿದ್ದಾರೆ. ಉದ್ಘಾನಟೆ ಬಳಕ ಪ್ರಧಾನಿ ಮೋದಿ, ಏರೋ ಇಂಡಿಯಾದ ವೈಮಾನಿಕ ಪ್ರದರ್ಶನವನ್ನು ನೋಡಲಿದ್ದಾರೆ. ಬಳಿಕ ಯಲಹಂಕದಿಂದ ನೇರವಾಗಿ ತ್ರಿಪುರಾಗೆ ತೆರಳಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *