ಮೈಸೂರು: ಈಗಂತು ಅಭಿವೃದ್ಧಿ ಕಾರ್ಯಗಳು ಮರಿಚೀಕೆಯಾದಂತಿದೆ. ಆಗಾಗ ಅಲ್ಲೊಂದು ಇಲ್ಲೊಂದು ಅಭಿವೃದ್ಧಿ ಕೆಲಸಗಳು ಕಣ್ಣಿಗೆ ಕಂಡಾಗ ಖುಷಿ ಪಡಬೇಕು. ಆದರೆ ಅದ್ಯಾಕೋ ಮೈಸೂರು ಜನ ಬೇಸರ ಮಾಡಿಕೊಂಡಿದ್ದಾರೆ. ಅಸಮಾಧಾನ ಹೊರ ಹಾಕಿದ್ದಾರೆ. ಅದಕ್ಕೂ ಒಂದು ಕಾರಣವಿದೆ.
ಜೂನ್ 23ಕ್ಕೆ ಪ್ರಧಾನಿ ಮೋದಿ ಮೈಸೂರು ನಗರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ಮೈಸೂರು ಮಹಾನಗರ ಪಾಲಿಕೆ ರಸ್ತೆಗಳುಗೆಲ್ಲಾ ಟಾರು ಹಾಕಿಸುತ್ತಿದ್ದಾರೆ. ಗುಂಡಿ ಬಿದ್ದ ರಸ್ತೆಗೆಲ್ಲಾ ಟಾರು ಹಾಕಿಸಿ, ಸ್ವಚ್ಛ ಮಾಡುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಯಾಕೆಂದ್ರೆ ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಿ ಎಂದು ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿದರು, ಪಾಲಿಕೆ ಸಿಬ್ಬಂದಿ ಕ್ಯಾರೆ ಎಂದಿರಲಿಲ್ಲ. ಆದರೆ ಇದೀಗ ಪ್ರಧಾನಿ ಮೋದಿಯವರು ಬರುತ್ತಿದ್ದಾರೆಂಬ ಕಾರಣಕ್ಕೆ ರಸ್ತೆಗಳಲ್ಲಿನ ಗುಂಡಿಗಲಕನ್ನು ಮುಚ್ಚುತ್ತಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ನಮ್ಮ ವಾರ್ಡ್ ಗೂ ಭೇಟಿ ನೀಡಲಿ. ಆಗಲಾದರೂ ರಸ್ತೆಗಳು ಗುಂಡಿ ಮುಕ್ತವಾಗುತ್ತದೆ ಎಂದು ಸಾರ್ವಜನಿಕರು ತಮ್ಮ ಮನದ ಸಂಕಟ ತೋಡಿಕೊಂಡಿದ್ದಾರೆ.
ಯೋಗ ದಿನಾಚರಣೆಯ ಅಂಗವಾಗಿ ಪ್ರಧಾನಿ ಮೋದಿಯವರು ಮೈಸೂರಿಗೆ ಆಗಮಿಸಲಿದ್ದಾರೆ. ಹೀಗಾಗಿ ಇಂದಿನಿಂದಲೇ ಜಿಲ್ಲೆಯ ಅಭಿವೃದ್ಧಿ ಕಾರ್ಯ ಶುರುವಾಗಿದೆ. ಅದರ ಭಾಗವಾಗಿ ಗುಂಡಿ ಮುಕ್ತ ರಸ್ತೆ ಮಾಡಲು ಶುರು ಮಾಡಿದ್ದಾರೆ.