ನವದೆಹಲಿ: ಸುಷ್ಮಾ ಸ್ವರಾಜ್ ಅವರ ಮಾನವೀಯ ಗುಣಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದಂತು ಸುಳ್ಳಲ್ಲ. ಇಂದು ಅವರು ನಮ್ಮೊಡನಿಲ್ಲ. ಇಂದು ಅವರ 70ನೇ ವರ್ಷದ ಹುಟ್ಟುಹಬ್ಬ. ಅವರ ಹುಟ್ಟುಹಬ್ಬದ ದಿನ ಪ್ರಧಾನಿ ಮೋದಿ ವಿಶೇಷವಾದ ವಿಚಾರವೊಂದನ್ನ ಶೇರ್ ಮಾಡಿಕೊಂಡಿದ್ದಾರೆ.

ದಿ.ಸುಷ್ಮಾ ಸ್ವರಾಜ್ ಅವರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಇದೇ ವೇಳೆ ಸುಷ್ಮಾ ಸ್ವರಾಜ್ ಅವರ ದಿನವನ್ನ ನೆನೆದಿದ್ದಾರೆ. 25 ವರ್ಷಗಳ ಹಿಂದೆ ನಾನು ಪಕ್ಷದಲ್ಲಿ ಸಂಘಟನಕಾರನಾಗಿ ಕೆಲಸ ಮಾಡುತ್ತಿದ್ದಾಗ ಸುಷ್ಮಾ ಜಿ ಅವರು ಗುಜರಾತ್ ಚುನಾವಣಾ ಪ್ರಚಾರದಲ್ಲಿದ್ದರು. ಆ ವೇಳೆ ವಡ್ನಗರಕ್ಕೆ ಹೋಗಿ ನನ್ನ ತಾಯಿಯನ್ನು ಭೇಟಿ ಮಾಡಿ, ಮಾತನಾಡಿಸಿ ಬಂದಿದ್ದರು.

ನನ್ನ ತಾಯಿ ವಿದ್ಯಾವಂತರಲ್ಲದೆ ಇದ್ದರು ಆಲೋಚನೆಗಳಲ್ಲಿ ಆಧುನಿಕರು. ಅದೇ ವೇಳೆ ಸೋದರಳಿಯನಿಗೆ ಹೆಣ್ಣು ಮಗು ಜನಿಸಿತ್ತು. ಜ್ಯೋತಿಷ್ಯ ಕೇಳಿ ಆಗಿತ್ತು. ಆದ್ರೆ ಅದೇ ವೇಳೆ ನನ್ನ ತಾಯಿ ಸುಷ್ಮಾ ಸ್ವರಾಜ್ ಅವರ ಹೆಸರಿಡುವುದಾಗಿ ಸೂಚಿಸಿದ್ದರು. ಆ ಸನ್ನಿವೇಶ ಈಗಲೂ ನೆನಪಿದೆ ಎಂದು ಹಳೆಯ ದಿನಗಳನ್ನು ಫೇಸ್ ಬುಕ್ ಪೋಸ್ಟರ್ ನಲ್ಲಿ ಮೆಲುಕು ಹಾಕಿದ್ದಾರೆ.


