ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಇಂದು ಪ್ರಧಾನಿ ಮೋದಿ ಮಹಾಕಾಳೇಶ್ವರ ಕಾರಿಡಾರ್ ಉದ್ಘಾಟನೆ ಮಾಡಿದ್ದಾರೆ. ಇದು ಬಹಳಷ್ಟು ಸ್ಪೆಷಾಲಿಟಿಯನ್ನು ಹೊಂದಿದೆ. ಅದರಲ್ಲೂ ಶಿವನ ವಿಗ್ರಹದಲ್ಲು ಕ್ಯೂ ಆರ್ ಕೋಡ್ ಕಾಣಿಸುತ್ತಿದೆ. ಇದನ್ನು ಕಂಡು ಜನ ಆಶ್ಚರ್ಯಚಕಿತರಾಗಿದ್ದಾರೆ.
A memorable day as Shri Mahakal Lok is being inaugurated. This will add to Ujjain's vibrancy. https://t.co/KpHLKAILeP
— Narendra Modi (@narendramodi) October 11, 2022
2017ರಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಇಂದು ಪ್ರಧಾನಿ ಮೋದಿ ಮೊದಲನೇ ಹಂತವನ್ನು ಉದ್ಘಾಟನೆ ಮಾಡಿದ್ದಾರೆ. ಇದಕ್ಕೆ 350 ಕೋಟಿ ಖರ್ಚಾಗಿದೆ. ಇನ್ನು ಎರಡನೇ ಹಂತದ ಕಾರಿಡಾರ್ ಕಾರ್ಯ ನಡೆಯುತ್ತಿದೆ. ಇದಕ್ಕೆ 856 ಕೋಟಿ ವೆಚ್ಚ ತಗುಲಲಿದೆ. ಕಾಶಿ ಕಾರಿಡಾರ್ ಮಾದರಿಯಲ್ಲಿಯೇ ಮಹಾಕಾಳೇಶ್ವರ ಕಾರಿಡಾರ್ ಅಭಿವೃದ್ಧಿಗೊಳ್ಳುತ್ತಿದೆ.
ಬರೋಬ್ಬರಿ 47 ಹೆಕ್ಟೇರ್ ಪ್ರದೇಶದಲ್ಲಿ ಕಾರಿಡಾರ್ ಸಿದ್ಧವಾಗಿದೆ. ಸುಮಾರು 900 ಮೀಟರ್ ಉದ್ಧದ ಕಾರಿಡಾರ್ ಇದಾಗಿದೆ. ಇದು ಎರಡು ಪ್ರಮುಖ ಗೇಟ್ ವೇಗಳನ್ನು ಹೊಂದಿದೆ. ನಂದಿ ದ್ವಾರ ಹಾಗೂ ಪಿನಾಕಿ ದ್ವಾರ ಎಂದು ಹೆಸರಿಸಲಾಗಿದೆ. ಶಿವನ ವಿಗ್ರಹದಲ್ಲಿ ಕ್ಯೂಆರ್ ಕೋಡ್ ಇಡಲಾಗಿದೆ. ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಅಲ್ಲಿನ ವಿಶೇಷತೆಗಳೆಲ್ಲಾ ಬರಲಿದೆ.