ಇಂದು ರಕ್ಷಾ ಬಂಧನ. ದೇಶಾದ್ಯಂತ ರಕ್ಷಾ ಬಂಧನ ಆಚರಿಸಿ ಸೋದರ – ಸೋದರಿಯರು ಖುಷಿ ಪಡುತ್ತಿದ್ದಾರೆ. ಇದೀಗ ಪ್ರಧಾನಿ ಮೋದಿ ಅವರು ರಕ್ಷಾ ಬಂಧನ ಆಚರಣೆ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪ್ರಧಾನಿ ಮೋದಿ ಅವರು ವರ್ಷ ವರ್ಷ ರಾಖಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತಾರೆ. ಈ ಬಾರಿ ಮಕ್ಕಳ ಜೊತೆಗೆ ಈ ರಾಖಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಶಾಲಾ ಮಕ್ಕಳೊಂದಿಗೆ ರಾಖಿ ಹಬ್ಬ ಆಚರಿಸಿದ್ದಾರೆ. ಮಕ್ಕಳೊಟ್ಟಿಗೆ ರಾಖಿ ಕಟ್ಟಿಸಿಕೊಂಡು, ಮಕ್ಕಳ ಜೊತೆಗೆ ಒಂದಷ್ಟು ಸಮಯ ಕಳೆದಿದ್ದಾರೆ. ಪುಟಾಣಿ ಮಕ್ಕಳಿಗೆ ರಾಖಿ ಕಟ್ಟಿದ್ದಕ್ಕೆ ಪ್ರಧಾನಿ ಮೋದಿ ಅವರು ಪ್ರೀತಿಯ ಮುತ್ತನ್ನು ನೀಡಿದ್ದಾರೆ.

School girls tie Rakhi to Prime Minister @narendramodi ji in Delhi, as they celebrate the festival of #RakshaBandhan with him. pic.twitter.com/3n91Ua8A4h
— Prathap Simha (@mepratap) August 30, 2023
ಸಂಸದ ಪ್ರತಾಪ್ ಸಿಂಹ ಪ್ರಧಾನಿ ಮೋದಿ ಅವರು ರಾಖಿ ಹಬ್ಬ ಆಚರಣೆ ಮಾಡಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ಶಾಲಾ ಬಾಲಕಿಯರು ಪ್ರಧಾನಿ ಮೋದಿಗೆ ರಾಖಿ ಕಟ್ಟಿದರು ಎಂದು ಬರೆದುಕೊಂಡಿದ್ದಾರೆ. ಈ ಸುಂದರ ವಿಡಿಯೋಗೆ ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್ಸ್ ಬರುತ್ತಿವೆ.

