ದೀಪಾವಳಿ ಹಬ್ಬ ಸೇರಿದಂತೆ ಹಲವು ವಿಶೇಷತೆಗಳನ್ನು ಪ್ರಧಾನಿ ಮೋದಿ ಅವರು ಸೈನಿಕರ ಜೊತೆಗೆ ಸೇರಿ ಹಬ್ಬ ಆಚರಿಸುತ್ತಾರೆ. ಇಂದು ದೀಪಾವಳಿ ಹಬ್ಬ ಇಂದು ಕೂಡ ಸೈನಿಕರೊಟ್ಟಿಗೆ ಆಚರಿಸಲು ಸಿದ್ಧವಾಗಿದ್ದಾರೆ. ಕಾರ್ಗಿಲ್ ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಸೈನಿಕರಿಗೆ ದೀಪಾವಳಿ ಹಬ್ಬದ ಶುಭಕೋರಿದ್ದಾರೆ.
ದೀಪಾವಳಿ ಹಬ್ಬ ಬಂತೆಂದರೆ ಪ್ರತಿ ವರ್ಷ ಒಂದೊಂದು ಗಡಿಗೆ ಭೇಟಿ ನೀಡಿ, ಸೈನಿಕರೊಟ್ಟಿಗೆ ಹಬ್ಬ ಆಚರಿಸುತ್ತಾರೆ. ಕಳೆದ ವರ್ಷ ಕಾಶ್ಮೀರದ ಗಡಿಯಲ್ಲಿ ಹಬ್ಬ ಆಚರಿಸಿದ್ದ ಪ್ರಧಾನಿ ಈ ವರ್ಷ ಕಾರ್ಗಿಲ್ ನಲ್ಲಿ ಹಬ್ಬ ಆಚರಿಸುತ್ತಿದ್ದಾರೆ. ಸೈನಿಕರು ಕೂಡ ಪ್ರಧಾನಿ ಮೋದಿಯವರಿಗೆ ಸ್ವಾಗತ ಕೋರಿದ್ದಾರೆ.
ಈ ವೇಳೆ ಸೈನಿಕರನ್ನುದ್ದೇಶಿ ಮಾತನಾಡಿದ ಮೋದಿ, ಸೈನಿಕರೊಂದಿಗೆ ಹಬ್ಬ ಆಚರಣೆ ಮಾಡುವುದೆ ವಿಶೇಷವಾಗಿದೆ. ಕಾರ್ಗಿಲ್ ಭೂಮಿ ಸೈನಿಕರ ಶೌರ್ಯ ಬಿಂಬಿಸುತ್ತೆ. ಈ ವಿಜಯ ಭೂಮಿಯಲ್ಲಿ ದೀಪಾವಳಿ ಶುಭಕೋರುತ್ತೇನೆ. ನಿಮ್ಮೊಂದಿಗೆ ಇರುವುದಕ್ಕಿಂತ ದೊಡ್ಡ ದೀಪಾವಳಿ ಏನಿದೆ ಎಂದಿದ್ದಾರೆ.