ನವದೆಹಲಿ: ಇಂದು ಹೊಸ ವರ್ಷ. ಇದೇ ಖುಷಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಹೊಸ ವರ್ಷದ ಗಿಫ್ಟ್ ನೀಡಿದ್ದಾರೆ. ಇದು ರೈತ ಬಾಂಧವರಿಗೆ ಸಂತಸ ತಂದುಕೊಡುವಂತಿದೆ.
ಹೊಸ ವರ್ಷದ ಗಿಫ್ಟ್ ಆಗಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ನೀಡಲಿದ್ದಾರೆ. ಇಂದು ಮಧ್ಯಾಹ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಖುಷಿಯ ವಿಚಾರ ಹಂಚಿಕೊಳ್ಳಲಿದ್ದಾರೆ. ಈ ಬಗ್ಗೆ ಪ್ರಧಾನ ಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ.
ಫಲಾನುಭವಿ ರೈತರಿಗೆ ಪ್ರಧಾನಿ ಮೋದಿ 10ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. ದೇಶಾದ್ಯಂತ ವರ್ಷಕ್ಕೆ 6 ಸಾವಿರ ರೂಪಾಯಿ ರೈತರ ಅಕೌಂಟ್ ಸೇರಲಿದೆ. ಇದು 10ನೇ ಕಂತು ಇಂದು ಬಿಡುಗಡೆಯಾಗಲಿದೆ.