ರೈತರ ಖಾತೆಗೆ ನೇರವಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣ ಬಿಡುಗಡೆಯಾಗಲಿದೆ. 14ನೇ ಕಂತಿನ ಹಣವನ್ನು ಬಿಡುಗಡೆಯಾಗಬೇಕಿದೆ. ಆ ಹಣ ನಾಳೆ ಅಂದ್ರೆ ಜುಲೈ 27ಕ್ಕೆ ರಿಲೀಸ್ ಆಗಲಿದೆ. 8 ಕೋಟಿಗೂ ಹೆಚ್ಚು ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗಲಿದೆ.
ಫಲಾನುಭವಿಗಳ ಖಾತೆಗೆ 2 ಸಾವಿರ ರೂಪಾಯಿ ಹಣ ನೇರವಾಗಿ ವರ್ಗಾವಣೆಯಾಗಲಿದೆ. ರೈತರಿಗೆ ವರ್ಷಕ್ಕೆ 6 ಸಾವಿರ ಹಣ ನೀಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಅದರಲ್ಲಿ ಒಂದೇ ಸಲ ಕೊಡುವ ಬದಲು, ತಿಂಗಳಿಗೆ 2 ಸಾವಿರ ಕೊಡುತ್ತೇವೆ ಎಂದು ತಿಳಿಸಲಾಗಿತ್ತು. ಅದರಂತೆ ಈಗ 13 ಕಂತು ಹಣ ನೀಡಲಾಗಿದೆ. ಈಗ 14ನೇ ಕಂತಿನ ಹಣವನ್ನು ನೇರವಾಗಿ ನಾಳರ ರೈತರ ಅಕೌಂಟ್ ಗೆ ಹಾಕಲಾಗುತ್ತದೆ.
ಪಿಎಂ ಕಿಸಾನ್ ಯೋಜನೆ ಮೂಲವಾಗಿ ಬಡ ರೈತರನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ನಂತರದ ದಿನಗಳಲ್ಲಿ ತೆರಿಗೆ ಪಾವತಿದಾರರು, ವೃತ್ತಿಪರರು, ಸರ್ಕಾರಿ ಅಧಿಕಾರಿಗಳು, ಶಾಸಕ ಸಂಸದ ಇತ್ಯಾದಿ ಜನಪ್ರತಿನಿಧಿಗಳು, ಪಿಂಚಣಿದಾರರು ಹೊರತುಪಡಿಸಿ ಕೃಷಿ ಮಾಡುತ್ತಿರುವ ಎಲ್ಲಾ ರೈತರನ್ನೂ ಇದರಲ್ಲಿ ಒಳ್ಳಗೊಳ್ಳಲಾಗಿದೆ.