Planets Parade | ಜೂನ್ 3 ರಿಂದ ಆಕಾಶದಲ್ಲಿ ಅದ್ಭುತ : ಒಂದೇ ಸಾಲಿನಲ್ಲಿ ಗ್ರಹಗಳ ಮೆರವಣಿಗೆ

ಸುದ್ದಿಒನ್, ಚಿತ್ರದುರ್ಗ, ಜೂ.02 : ಬಾಹ್ಯಾಕಾಶದಲ್ಲಿ ಆಗಾಗ್ಗೆ ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಈಗ ನಮ್ಮ ಸೌರವ್ಯೂಹದ 3-4 ಗ್ರಹಗಳು ಒಂದೇ ಸಾಲಿನಲ್ಲಿ ಇರುವುದನ್ನು ಬರಿಗಣ್ಣಿನಲ್ಲಿಯೇ ನೋಡಬಹುದಾಗಿದೆ.

ಜೂನ್ 3 ರಿಂದ 5 ರವರೆಗೆ ಗ್ರಹಗಳ ಪರೇಡ್ ನ್ನು ನೋಡಿ ಆನಂದಿಸಬಹುದಾಗಿದೆ. ಬೆಳಗಿನ ಜಾವ 5 ಗಂಟೆಯಿಂದ 5.30 ರ ಒಳಗೆ ದಿಗಂತದಲ್ಲಿ ಬುಧಗ್ರಹ, ಗುರುಗ್ರಹ, ನಂತರ ಮಂಗಳ ಹಾಗೂ ಅದರ ಮೇಲೆ ಶನಿಗ್ರಹಗಳು ಇರುವುದನ್ನು ಕಣ್ತುಂಬಿಕೊಳ್ಳಲು ಇದೊಂದು ಸದಾವಕಾಶ. ಇವುಗಳನ್ನು ವೀಕ್ಷಿಸಲು ಯಾವುದೇ ದೂರದರ್ಶಕ, ಬೈನಾಕ್ಯುಲರ್ ಗಳ ಅವಶ್ಯಕತೆ ಇಲ್ಲ ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *