ಚಿಕ್ಕಬಳ್ಳಾಪುರ: ಹೊಸ ವರ್ಷ ಅಂದಾಕ್ಷಣಾ ಎಲ್ಲಾದ್ರೂ ಒನ್ ಡೇ ಟ್ರಿಪ್ ಫ್ಲ್ಯಾನ್ ಮಾಡೋ ಅಭ್ಯಾಸ ಕೆಲವರದ್ದಾಗಿರುತ್ತೆ. ಅದರಲ್ಲೂ ನಂದಿ ಬೆಟ್ಟಕ್ಕೆ ಹೋಗೋ ಫ್ಲ್ಯಾನ್ ನಲ್ಲಿರ್ತಾರೆ. ಆದ್ರೆ ಆ ಫ್ಲ್ಯಾನ್ ನಲ್ಲಿದ್ರೆ ಒಮ್ಮೆ ಈ ಸ್ಟೋರಿ ನೋಡಿ.
ಇಂದು ಸಂಜೆ ೬ ಗಂಟೆಯಿಂದಲೇ ನಂದಿ ಗಿರಿಧಾಮ ಬಂದ್ ಹಿನ್ನಲೆ. ಗಿರಿಧಾಮದ ತಪ್ಪಲಿನಲ್ಲಿರುವ ಹೋಟೆಲ್, ರೆಸ್ಟೋರೆಂಟ್ ಮತ್ತು ಕೆಫೆ ಮಾಲೀಕರಿಗೆ ಪೋಲೀಸರು ಮಾರ್ಗಸೂಚಿ ಹೊರಡಿಸಿದೆ. ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ಪೋಲೀಸ್ ಅಧಿಕಾರಿಗಳಿಂದ ಸಭೆ ನಡೆಸಲಾಗಿದೆ.
ಕಾರೇಹಳ್ಳಿ ಕ್ರಾಸ್ ನ ಬಳಿಯ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆದಿದ್ದು, ಸರಕಾರದ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ರಾತ್ರಿ ೧೦ ರ ನಂತರ ಯಾವುದೇ ಡಿಜೆ, ಆರ್ಕೆಸ್ಟ್ರಾ, ಮ್ಯೂಸಿಕ್, ಪಾರ್ಟಿ ಮತ್ತಿತ್ತರ ಚಟುವಟಿಕೆಗಳನ್ನು ವ್ಯವಸ್ಥೆ ಮಾಡಬಾರದು. ನಿಯಮ ಮೀರಿ ಏನಾದರೂ ಓಪನ್ ಮಾಡಿದರೆ ಕಟ್ಟುನಿಟ್ಟಿನ ಕ್ರಮ ತಡಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಚಿಕ್ಕಬಳ್ಳಾಪುರ ಡಿವೈಎಸ್ಪಿ ವಾಸುದೇವ್, ಪಿಎಸ್ಐ ಪ್ರಶಾಂತ್ ಹಾಗೂ ಇತರೆ ಪೋಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಈ ನಿರ್ಧಾತ ತೆಗೆದುಕೊಳ್ಳಲಾಗಿದೆ.