ಕಳೆದೆರಡು ದಿನದಿಂದ ವೈರಲ್ ಆಗ್ತಿರೋ ಫೋಟೊ ಹಿಂದಿನ ಕಥೆ ಏನು ಗೊತ್ತಾ..?

suddionenews
1 Min Read

ತುಮಕೂರು: ಕಳೆದ ಎರಡ್ಮೂರು ದಿನದಿಂದ ಈ ಫೋಟೋವನ್ನ ನೀವೂ ನೋಡಿರ್ತೀರಾ.. ಅಯ್ಯಯ್ಯೋ ಯಾಕಿಂಗಾಯ್ತು ಅಂತ ಬಾಯ್ಮೆಲೆ ಬೆರಳು ಇಟ್ಕೊಂಡಿರ್ತೀರಾ.. ವೈಯಕ್ತಿಕ ಬದುಕು ಅಂತಾನೂ ನೋಡದೆ ಟ್ರೋಲ್ ಮಾಡುವವರಿಗೆ ಹಬ್ಬದೂಟವೂ ಆಗಿರುತ್ತೆ.. ಆದ್ರೆ ಆ ವೈರಲ್ ಆದ ಫೋಟೋ ಹಿಂದೆ ಅದೆಷ್ಟು ಕಾರಣಗಳಿವೆಯೋ.

ಈ ಘಟನೆ ನಡೆದಿರೋದು ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದಲ್ಲಿ. ಈ ಫೋಟೋದಲ್ಲಿರುವ ದಂಪತಿ ಶಂಕ್ರಣ್ಣ ಮತ್ತು ಮೇಘನಾ ಅನ್ನೋ ನವ ಜೋಡಿ ಹೀಗೆ ಟ್ರೋಲ್ ಗೆ ಒಳಗಾಗಿರೋದು.

ಟ್ರೋಲ್ ಗೆ ಒಳಗಾಗೋದಕ್ಕೆ ಕಾರಣ ಅವರಿಬ್ಬರ ವಯಸ್ಸು.. ಹೌದು ಶಂಕ್ರಣ್ಣನಿಗೆ 45 ವರ್ಷ ಮೇಘನಾಗೆ ಇನ್ನು ಕೇವಲ 25 ವರ್ಷ. ಬಲ್ಲ ಮೂಲಗಳಿಂದ ಈ ಹಿಂದೆಯೇ ಮೇಘನಾಗೆ ಮದುವೆಯಾಗಿತ್ತಂತೆ. ಗಂಡ ಎರಡು ವರ್ಷಗಳಿಂದ ಬಂದಿರಲಿಲ್ಲವಂತೆ. ಹಾಗೇ ಶಂಕ್ರಣ್ಣನಿಗೆ ಮದುವೆಯೇ ಆಗಿರಲಿಲ್ಲವಂತೆ. ಮೇಘನಾನೇ ಕೇಳಿ ಮದುವೆಯಾಗಿರೋದು ಅನ್ನೋ ಮಾತಿದೆ.

ಇವರಿಬ್ಬರ ಮದುವೆಗೆ ಸಾಕಷ್ಟು ಪರ-ವಿರೋಧಗಳು ಕೇಳಿ ಬಂದಿವೆ. ಒಪ್ಪಿ ಅಪ್ಪಿ ಆಗೋ ಮದುವೆಗೆ ವಯಸ್ಸಿನ ಅಂತರವೇನು ಅನ್ನೋದು ಕೆಲವರ ವಾದವಾದ್ರೆ ಮಧು ಮಗಳೆ ಒಪ್ಪಿರುವಾಗ ಚರ್ಚೆ ಯಾಕೆ ಎಂಬ ಮಾತುಗಳು ಕೇಳಿ ಬಂದಿವೆ.

Share This Article
Leave a Comment

Leave a Reply

Your email address will not be published. Required fields are marked *