ಬೆಂಗಳೂರು: ದೇಶ ವಿರೋಧಿ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದ ಮೇಲೆ ಕೇಂದ್ರ ಸರ್ಕಾರ ಪಿಎಫ್ಐ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಕೇಂದೃ ಸರ್ಕಾರದ ಆದೇಶದನ್ವಯ ಇದೀಗ ಆ ಸಂಘಟನೆಗೆ ಸಂಬಂಧಿಸಿದ ವೆಬ್ ಸೈಟ್ ಗಳು ಬ್ಯಾನ್ ಆಗಿದೆ.
ಪಿಎಫ್ಐ ಸಂಘಟನೆಯ ಅಧಿಕೃತ ವೆಬ್‌ಸೈಟ್ ಬ್ಲಾಲ್ ಆಗಿದೆ. ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆ ಬ್ಲಾಕ್ ಮಾಡಲಾಗಿದೆ. ಪಿಎಫ್ಐ ನಿಷೇಧಿತ ಸಂಘಟನೆಯಾಗಿದ್ದರಿಂದ ಬ್ಲಾಕ್ ಮಾಡಲಾಗಿದೆ. ಭಾರತದಲ್ಲಿ ಇನ್ಮುಂದೆ ಪಿಎಫ್ಐ ಸಂಘಟನೆಗಳನ್ನು ತೆರೆಯುವಂತಿಲ್ಲ. ಟ್ವಿಟ್ಟರ್, ಇನ್ಸ್ಟಾಗ್ರಾಮ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದ ಕಂಪನಿಗಳಿಗೂ ಮಾಹಿತಿ ನೀಡಲಾಗಿದೆ. ಮುಂದಿನ ಸಮಯದಲ್ಲಿ ಎಲ್ಲಾ ವೆಬ್ ಸೈಟ್, ಅಕೌಂಟ್ ಗಳನ್ನು ಡಿಲೀಟ್ ಮಾಡಲಾಗುತ್ತದೆ.