ಬೆಂಗಳೂರು: ಪೆಟ್ರೋಲ್ ಬೆಲೆ ಇಂದು ಇಳಿಯುತ್ತೆ ನಾಳೆ ಇಳಿಯುತ್ತೆ ಅಂತ ಕಾಯೋದೆ ಬಂತು. ಆದ್ರೆ ಇಳಿಯುವ ಯಾವ ಲಕ್ಷಣವೂ ಕಾಣಿಸ್ತಿಲ್ಲ. ಗ್ರಾಹಕರ ನಿರೀಕ್ಷೆ ಗಗನ ಕುಸುಮವಾಗಿಯೇ ಇದೆ. ಇಂದು ಕೂಡ ಪೆಟ್ರೋಲ್ ಬೆಲೆ ಮತ್ತೆ ಏರಿಕೆಯಾಗಿದೆ.
ಕಳೆದ 5 ದಿನದಿಂದಲೂ ಪೆಟ್ರೋಲ್ ಬೆಲೆ ಸತತವಾಗಿ ಏರಿಕೆ ಕಂಡಿದೆ. ಪೆಟ್ರೋಲ್ ಬೆಲೆಯಲ್ಲಿ ಇಂದು ಮತ್ತೆ 35 ಪೈಸೆ ಏರಿಕೆಯಾಗಿದೆ. ಡಿಸೇಲ್ ಬೆಲೆಯಲ್ಲಿ 37 ಪೈಸೆ ಏರಿಕೆಯಾಗಿದೆ.
ಈ ಮೂಲಕ ಪೆಟ್ರೋಲ್ ಪ್ರತಿ ಲೀಟರ್ ಗೆ 113.15 ರೂಪಾಯಿ ಏರಿಕೆಯಾಗಿದ್ರೆ ಡಿಸೇಲ್ ಬೆಲೆ 104.95 ರೂಪಾಯಿಗೆ ಏರಿಕೆಯಾಗಿದೆ. ಹೀಗೆ ದಿನೇ ದಿನೇ ತೈಲ ಬೆಲೆ ಏರಿಕೆಯಾಗ್ತಿರೋದು ಗ್ರಾಹಕರನ್ನ ಕಂಗಾಲಾಗಿಸಿದೆ. ಯಾವಾಗ ಬೆಲೆ ಇಳಿಯುತ್ತೆ ಅನ್ನೋ ಚಿಂತೆ ಕಾಡುತ್ತಿದೆ. ಪ್ರತಿಯೊಬ್ಬರು ಬೆಲೆ ಇಳಿಕೆ ಕಡೆಯೇ ಚಿತ್ತ ನೆಟ್ಟಿದ್ದಾರೆ. ಬೆಲೆ ಏರಿಕೆಯಾಗ್ತಾನೆ ಹೋದ್ರೆ ಸಾಮಾನ್ಯ ಮನುಷ್ಯ ಜೀವಿಸುವುದಾದರೂ ಹೇಗೆ ಎಂಬ ಪ್ರಶ್ನೆ ಕಾಡೋದಕ್ಕೆ ಶುರುವಾಗಿದೆ.
ದುಡಿಮೆ ಕಡಿಮೆ ಖರ್ಚು ವೆಚ್ಚಗಳು ಹೆಚ್ಚಾಗಿವೆ. ಒಂದ್ಕಡೆ ತೈಲ ಬೆಲೆ ಮತ್ತೊಂದು ಕಡೆ ಗ್ಯಾಸ್, ದಿನನಿತ್ಯ ಬಳಕೆಯ ವಸ್ತುಗಳು ಸಹ ಅಷ್ಟೆ ವೇಗವಾಗಿ ಹೆಚ್ಚಾಗುತ್ತಿವೆ. ಇದು ಹೀಗೆ ಮುಂದುವರೆದರೆ ಕೂಲಿ ಮಾಡಿ ಬದುಕುವವರ ಪಾಡು ಅದೋಗತಿ.