ಬೆಂಗಳೂರು : ವಾಹನ ಸವಾರರಿಗೆ ಶುಭವಾರ್ತೆ. ದೇಶದಲ್ಲಿ ಹಲವು ದಿನಗಳ ನಂತರ ಇಂಧನ ಬೆಲೆ ಇಳಿಕೆಯಾಗಿದೆ. ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 40 ಪೈಸೆ ಇಳಿಸಲು ನಿರ್ಧರಿಸಿವೆ. ಹೊಸ ಬೆಲೆಗಳು ಮಂಗಳವಾರ ಬೆಳಗ್ಗೆಯಿಂದಲೇ ಜಾರಿಗೆ ಬಂದಿವೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಹಲವು ದಿನಗಳಿಂದ ಸ್ಥಿರವಾಗಿರುವ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸುತ್ತಿವೆ. ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲ ಬೆಲೆ 95 ಡಾಲರ್ ಗಿಂತ ಕಡಿಮೆ ಇದೆ. ಆರು ತಿಂಗಳ ನಂತರ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ.ಈ ವರ್ಷದ ಏಪ್ರಿಲ್ 7 ರಂದು ಕೊನೆಯ ಬಾರಿಗೆ ಬೆಲೆ ಇಳಿಕೆಯಾಗಿತ್ತು. ಸದ್ಯ ಲೀಟರ್ ಗೆ 40 ಪೈಸೆ ಇಳಿಕೆಯಾಗಿದ್ದರೂ ಮುಂದಿನ ದಿನಗಳಲ್ಲಿ 2 ರೂ.ವರೆಗೆ ಇಳಿಕೆಯಾಗುವ ಸಾಧ್ಯತೆ ಇದೆಯಂತೆ.