ಕೊರೊನಾದಿಂದ ಆದ ನಷ್ಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಇನ್ನು ಸುಧಾರಿಸಿಕೊಳ್ಳುತ್ತಲೆ ಇದ್ದಾರೆ. ಈ ಮಧ್ಯೆ ಈಗಾಗಲೇ ಎಲ್ಲಾ ವಸ್ತುಗಳ ಮೇಲೂ ಬೆಲೆ ಏರಿಕೆ ಸಿಕ್ಕಾಪಟ್ಟೆ ಆಗೋಗಿದೆ. ಇದನ್ನೇ ಜನ ಅರಗಿಸಿಕೊಳ್ಳೋದಕ್ಕೆ ಆಗುತ್ತಿಲ್ಲ. ಮತ್ತೆ ಮತ್ತೆ ಬೆಲೆ ಏರಿಕೆ ಅಂದ್ರೆ ಜನ ಸ್ಥಿತಿ ಇನ್ನೇನಾಗಬೇಡ.
ಇದೀಗ ಇಂದಿನಿಂದ ಮತ್ತೆ ಬೆಲೆ ಏರಿಕೆಯಾಗಿದೆ. ಸಿಲಿಂಡರ್ ಬೆಲೆಯಲ್ಲಿ ಒಂದೇ ಸಲಕ್ಕೆ 50 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ 952 ರೂಪಾಯಿ ಸಿಲಿಂಡರ್ ನ ಬೆಲೆಯಾಗಿದೆ. ಕಳೆದ ವರ್ಷ ಹದಿನೈದು ರೂಪಾಯಿ ಏರಿಕೆ ಮಾಡಲಾಗಿತ್ತು. ಆದ್ರೆ ಈ ಬಾರಿ ಒಂದೇ ಸಲ 50 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಅಷ್ಟೇ ಅಲ್ಲ ಪೆಟ್ರೋಲ್-ಡಿಸೇಲ್ ಬೆಲೆಯಲ್ಲೂ ಏರಿಕೆಯಾಗಿದೆ. ಪ್ರತಿ ಡಿಸೇಲ್ ಮತ್ತು ಪೆಟ್ರೋಲ್ ಮೇಲೆ 80 ಪೈಸೆ ಏರಿಕೆಯಾಗಿದೆ. ಇಂಧನ ಬೆಲೆಯಲ್ಲಿ ಇಳಿಕೆಯಾಗಬಹುದು ಎಂದು ನಿರೀಕ್ಷೆಯಿಂದ ಕಾಯುತ್ತಿದ್ದವರಿಗೆ ಶಾಕ್ ನೀಡಿದೆ. ಉಕ್ರೇನ್ ಮೇಲಿನ ಯುದ್ಧ, ಅಂತರಾಷ್ಟ್ರೀಯ ಕಚ್ಚಾತೈಲ ಬೆಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ ದೇಶದಲ್ಲೂ ಸಿಲಿಂಡರ್ ಬೆಲೆ ಹಾಗೂ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಹೆಚ್ಚಳವಾಗಿದೆ.