ಪೆಟ್ರೋಲ್-ಡಿಸೇಲ್ ದರ ಏರಿಕೆ : ಸೈಕಲ್ ನಲ್ಲಿ ಹೊರಟ ಬಿಜೆಪಿ ನಾಯಕರು..!

1 Min Read

ಬೆಂಗಳೂರು: ಪೆಟ್ರೋಲ್ – ಡಿಸೇಲ್ ದರ ಏರಿಕೆ ವಿಚಾರಕ್ಕೆ ಬಿಜೆಪಿ ನಾಯಕರು ಇಂದು ಕೂಡ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ. ಇಳಿಸಿ.. ಇಳಿಸಿ.. ತೈಲ ಬೆಲೆ ಇಳಿಸಿ, ತೊಲಗಿಸಿ.. ತೊಲಗಿಸಿ ರಾಜ್ಯ ಸರ್ಕಾರ ತೊಲಗಿಸಿ.. ಬೇಕೆ ಬೇಕು ನ್ಯಾಯ ಬೇಕು. ಬೆಲೆ ಏರಿಕೆ ಮಾಡಿದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದ್ದಾರೆ.

ಇದೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತಮ್ಮ ಟ್ವಿಟ್ಟರ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ‘ಬಿಜೆಪಿ ಹೋರಾಟ ಹತ್ತಿಕ್ಕಲು ಪೋಲಿಸ್ ಬಳಸಿ ಕೊಳ್ಳುತ್ತಿರುವ ರಣಹೇಡಿ ಕಾಂಗ್ರೆಸ್ ಸರ್ಕಾರ. ನಾಡಿನ ಜನರ ಮೇಲೆ ದಿನದಿಂದ ದಿನಕ್ಕೆ ಬೆಲೆ ಏರಿಕೆಯ ಬರೆ ಎಳೆಯುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಿಂದ ವಿಧಾನಸೌಧದವರೆಗೆ ಸೈಕಲ್‌ ಜಾಥಾ ಹಮ್ಮಿಕೊಳ್ಳಲಾಗಿತ್ತು. @BJP4Karnataka ಹೋರಾಟಕ್ಕೆ ಬೆದರಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಜಾಥಾ ಆರಂಭಕ್ಕೂ ಮುನ್ನವೇ ಪೊಲೀಸರ ಮೂಲಕ ಬಂಧಿಸಿದ್ದಾರೆ.

ಅಧಿಕಾರ ಬಲದಿಂದ ನಮ್ಮ ಹೋಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ, ನಿಮ್ಮ ಸರ್ಕಾರದ ವಿರುದ್ಧ ರಾಜ್ಯದ ಜನಸಾಮಾನ್ಯರ ಸಹನೆಯ ಕಟ್ಟೆಯೊಡೆದು ಅವರು ಬೀದಿಗಿಳಿದು ಹೋರಾಡುವ ದಿನ ದೂರವಿಲ್ಲ. ದಿನಕ್ಕೊಂದು ದರ ಏರಿಕೆಯ ನಿರ್ಧಾರಗಳನ್ನು ಕೈ ಬಿಡುವ ತನಕ ಅಥವಾ ನೀವು ಅಧಿಕಾರ ಬಿಟ್ಟು ತೊಲಗುವ ತನಕ ಬಿಜೆಪಿ ಹೋರಾಟ ಕೊನೆಗಾಣದು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇಂದಿನ ಹೋರಾಟದಲ್ಲಿ ಮಾಜಿ ಉಪಮುಖ್ಯಮಂತ್ರಿ ಗಳಾದ ಶ್ರೀ @drashwathcn, ವಿಧಾನ ಪರಿಷತ್ ಸದಸ್ಯರಾದ ಶ್ರೀ @CTRavi_BJP, ಪ್ರಕೋಷ್ಠಕಗಳ ರಾಜ್ಯ ಸಂಚಾಲಕರಾದ ಶ್ರೀ ದತ್ತಾತ್ರಿ, ರಾಜ್ಯ ಕಾರ್ಯದರ್ಶಿ ಶ್ರೀ ತಮ್ಮೇಶ್ ಗೌಡ, ಜಿಲ್ಲಾಧ್ಯಕ್ಷರಾದ ಶ್ರೀ ಎಸ್.ಹರೀಶ್, ಶ್ರೀ ಸಪ್ತಗಿರಿ ಗೌಡ, ಸೇರಿದಂತೆ ಪಕ್ಷದ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *