ಇರಾನ್ – ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಈಗಾಗಲೇ ಗ್ಯಾಸ್, ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದೆ. ಯುದ್ಧ ನಿಲ್ಲುವ ಯಾವ ಮುನ್ಸೂಚನೆಯೂ ಕಾಣಿಸ್ತಾ ಇಲ್ಲ. ಇದರ ನಡುವೆ ಪೆಟ್ರೋಲ್ – ಡಿಸೇಲ್ ದರವೂ ಏರಿಕೆಯಾಗುವ ಎಲ್ಲಾ ಸೂಚನೆಗಳು ಕಾಣಿಸುತ್ತಿವೆ. ಮಧ್ಯಪ್ರಾಚ್ಯದ ಯುದ್ಧದ ಎಫೆಕ್ಟ್ ನಿಂದ ಇಲ್ಲಿನ ಗ್ರಾಹಕರು ಕೂಡ ನಡುಗುವಂತೆ ಆಗಿದೆ.
ಅದರಲ್ಲೂ ಪೆಟ್ರೋಲ್ ಪ್ರತಿ ಲೀಟರ್ ಗೆ 22 ರೂಪಾಯಿ, ಡಿಸೇಲ್ 24 ರೂಪಾಯಿವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗ್ತಾ ಇದೆ. ಈ ಮೂಲಕ ಪೆಟ್ರೋಲ್ ದರ 125 ರೂಪಾಯಿಗೆ, ಡಿಸೇಲ್ ದರ 115 ರೂಪಾಯಿಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಎಲ್ಲಾ ಡಿಸ್ಟ್ರಿಬ್ಯೂಟರ್ಸ್ ಗಳಿಗೂ ಈಗಾಗಲೇ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಪತ್ರವನ್ನು ಬರೆದಿದೆ. ಆ ಪತ್ರದಲ್ಲಿ ದರ ಏರಿಕೆಯ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಅಂದ್ರೆ ಯಾವ ಕ್ಷಣದಲ್ಲಾದರೂ ದರ ಏರಿಕೆಯಾಗಬಹುದು ಎಂಬ ಮಾಹಿತಿಯನ್ನು ಆ ಪತ್ರದ ಮೂಲಕ ನೀಡಲಾಗಿದೆ.
ಈಗಾಗಲೇ ಎಲ್ಪಿಜಿ ಸಿಲಿಂಡರ್ ದರ 60 ರೂಪಾಯಿ ಹಾಗೇ ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿಗರ ಏರಿಕೆಯಾಗಿತ್ತು. ಪ್ರಸ್ತುತ ಸಿಲಿಂಡರ್ ಗಳ ಕೊರತೆಯೂ ಕಾಡುತ್ತಿದೆ. ಇರಾನ್ – ಇಸ್ರೇಲ್ ಯುದ್ಧ ಇಂದಿಗೆ 11ನೇ ದಿನಕ್ಕೆ ಕಾಲಿಟ್ಟಿದೆ. ಅದರ ಪರಿಣಾಮ ದೇಶದ ಮೇಲೂ ತಗುಲಿದೆ. ಮೊದಲೇ ನಿರುದ್ಯೋಗದ ಸಮಸ್ಯೆಯಿಂದ ಬಳಲ್ತಾ ಇರೋರಿಗೆ ಈ ದರ ಏರಿಕೆಯ ಬರೆ ಜೋರಾಗಿನೆ ಬೀಳ್ತಾ ಇದೆ. ಅದರಲ್ಲೂ ವಾಹನ ಸವಾರರಿಗೂ ಈ ದರ ಏರಿಕೆಯ ಪೆಟ್ಟು ಬೀಳಲಿದೆ. ಇದರಿಂದ ಸಾಮನ್ಯ ಜನರಿಗೆ ಸಾಕಷ್ಟು ತೊಂದರೆ ಎದುರಾಗುವ ಸಾಧ್ಯತೆ ಇದೆ.





