ಅನ್ಯಾಯ, ಭ್ರಷ್ಟಾಚಾರ, ಲಂಚದ ಹಾವಳಿ ವಿರುದ್ದ ಜನಹಿತ ಹಿರಿಯ ನಾಗರೀಕರ ಹೋರಾಟ ಸಮಿತಿ ರಚಿನೆ : ಪಿ.ಈ.ವೆಂಕಟಸ್ವಾಮಿ

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 03 : ಅನ್ಯಾಯ, ಭ್ರಷ್ಟಾಚಾರ, ಲಂಚದ ಹಾವಳಿ ವಿರುದ್ದ ಹೋರಾಡಲು ಜನಹಿತ ಹಿರಿಯ ನಾಗರೀಕರ ಹೋರಾಟ ಸಮಿತಿ ರಚಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಪಿ.ಈ.ವೆಂಕಟಸ್ವಾಮಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೂರು ತಿಂಗಳ ಹಿಂದೆ ಸಮಿತಿ ರಚಿಸಿ ನೊಂದಾಯಿಸಲಾಗಿದೆ. ಚಿತ್ರದುರ್ಗದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಅನೇಕ ರೋಗಿಗಳು ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ನಗರದಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಬೀದಿ ದೀಪ, ಸ್ವಚ್ಚತೆ ಮರೀಚಿಕೆಯಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಲಂಚವಿಲ್ಲದೆ ಕೆಲಸಗಳಾಗುವುದಿಲ್ಲ. ಚಳ್ಳಕೆರೆ ಗೇಟ್‍ನಲ್ಲಿ ಜನಸಂದಣಿ ಹಾಗೂ ವಾಹನಗಳ ದಟ್ಟಣೆ ಜಾಸ್ತಿಯಾಗುತ್ತಿರುವುದರಿಂದ ಅಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಬೇಕು. ಶನಿಮಹಾತ್ಮ ದೇವಾಲಯದ ರಸ್ತೆ ಅದ್ವಾನವಾಗಿದೆ. ಭದ್ರಾಮೇಲ್ದಂಡೆ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಜಿಲ್ಲೆಗೆ ನೀರು ಹರಿಸುವಂತೆ ಪಿ.ಈ.ವೆಂಕಟಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.

ಜನಹಿತ ಹಿರಿಯ ನಾಗರೀಕರ ಹೋರಾಟ ಸಮಿತಿ ಕಾರ್ಯದರ್ಶಿ ವೈ.ಕೆ.ಮಹಾಸ್ವಾಮಿ, ನಿರ್ದೇಶಕರುಗಳಾದ ಹೆಚ್.ಕನಕದಾಸ್, ಜಿ.ಟಿ.ಲಕ್ಷ್ಮಿನಾರಾಯಣಸ್ವಾಮಿ, ಹನುಮಂತರೆಡ್ಡಿ, ಈಶ್ವರಪ್ಪ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *