ಅಮೃತಸರೋವರ ಯೋಜನೆಯ ಕಾಮಗಾರಿ ಕಳಪೆ ಎಂದು ಜನರ ಆಕ್ರೋಶ

1 Min Read

 

ಗುಬ್ಬಿ : ಅಮೃತ ಸರೋವರ ಯೋಜನೆ ಕಾಮಗಾರಿ ಕಳಪೆ ಮಾಡಲಾಗುತ್ತಿದೆ ಎಂದು ಕಿಟ್ಟದಕುಪ್ಪೆ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಕಿಟ್ಟಿದಕುಪ್ಪೆ ಗ್ರಾಮದಲ್ಲಿ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಮೃತ ಸರೋವರ ಯೋಜನೆಯಲ್ಲಿ ಕಾಮಗಾರಿ ನಡೆಸುತ್ತಿದ್ದು.ಗುಣಮಟ್ಟದ ಸಾಮಗ್ರಿಗಳನ್ನು ಬಳಸದೆ ಕಳಪೆ ಕಾಮಗಾರಿ ನಡೆಸುತ್ತಿದ್ದು.ಇಂಜಿನಿಯರ್ ಗಳು ಕೇವಲ ಬಿಲ್ ಮಾಡಿಕೊಳ್ಳುವುದಕ್ಕಾಗಿ ಕಾಮಗಾರಿಗಳನ್ನು ಬಳಸುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥ ನಟರಾಜು ಗೌಡ ಮಾತನಾಡಿ ಕಿಟ್ಟದ ಕುಪ್ಪೆ ಗ್ರಾಮದ ಕೆರೆ ಕಾಮಗಾರಿ ಪ್ರಾರಂಭದ ಹಂತದಲ್ಲೇ ನೀರು ಜಿನುಗಿ ಕುಸಿದು ಏರಿ ಒಡೆದು ಹೋಗುವ ಅಂಚಿನಲ್ಲಿದೆ.
ಕೆರೆಯ ಏರಿಗೆ ಬಳಪದ ಕಲ್ಲು ಉಪಯೋಗಿಸಿ ಕಳಪೆ ಕಾಮಗಾರಿ ಮಾಡಿದ್ದಾರೆ. ಅಧಿಕಾರಿಗಳು ಇದಕ್ಕೆ ಸಾಮಿಲ್ ಹಾಗಿ ಬಿಲ್ ಪಾಸ್ ಮಾಡಿಸಿಕೊಂಡಿದ್ದಾರೆ. ಈಗ ಕೆರೆ ಏರಿಯ ಕೆಳಬಾಗದಲ್ಲಿ ರಂದ್ರವಾಗಿ ನೀರು ಜಿನುಗುತ್ತಿದ್ದು ಏರಿ ಒಡೆದು ಹೋಗುವ ಅಂಚಿನಲ್ಲಿದೆ ಎಂದು ತಿಳಿಸಿದರು.

ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಬಾಲಾಜಿ ಮಾತನಾಡಿ ಕೆರೆಯ ದಡದಲ್ಲಿ ಇದ್ದ ತೂಬು ಕಿತ್ತು ನೀರು ಪೋಲಾಗುತ್ತಿದೆ . ಬೆಳಗಿನ ಜಾವ ಏರಿ ಕುಸಿಯುವ ಮಟ್ಟದಲ್ಲಿತ್ತು. ಅಧಿಕಾರಿಗಳನ್ನು ಸಂಪರ್ಕಿಸಿದರೆ ಫೋನಿಗೆ ಸಿಗುತ್ತಿಲ್ಲ. ಕೆರೆಯ ಆಜು ಬಾಜು ಅಡಿಕೆ ತೋಟಗಳಿದ್ದು ನೀರು ತುಂಬಿಕೊಂಡು ರೈತರು ಸಂಕಷ್ಟಕ್ಕೆ ಸಿಲುಕುವ ಮುನ್ನ ಎಚ್ಚೆತ್ತು ಗುಣಮಟ್ಟದ ಕಾಮಗಾರಿಯನ್ನು ಮಾಡಬೇಕೆಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *