Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜನರ ಪ್ರೀತಿ, ಅಭಿಮಾನಕ್ಕೆ ಎಂದೂ ಬೆಲೆ ಕಟ್ಟಲಾಗಲ್ಲ : ಡಾ.ಬಿ.ಎಲ್.ವೇಣು

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 :  ಈ ನೆಲದ ಜನರು ತೋರುತ್ತಿರುವ ಅಭಿಮಾನ, ಪ್ರೀತಿಯನ್ನು ಎಂದೂ ಮರೆಯಲಾಗದು, ಅದಕ್ಕೆ ಬೆಲೆಯೂ ಕಟ್ಟಲಾಗದು ಎಂದು ನಾಡಿನ ಹಿರಿಯ ಕಾದಂಬರಿಕಾರ, ಲೇಖಕ ಡಾ.ಬಿ.ಎಲ್.ವೇಣು ಹೇಳಿದರು.

ಪ್ರಾದೇಶಿಕ ಭಾಷಾ ಗುಣಾತ್ಮಕ ಚಲನ ಚಿತ್ರಗಳ ಆಯ್ಕೆ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ ಹಾಗೂ ವಾಲ್ಮೀಕಿ ಗುರುಪೀಠದಿಂದ ನೀಡಲಾಗುತ್ತಿರುವ ಪ್ರತಿಷ್ಠಿತ ರಾಜವೀರ ಮದಕರಿ ನಾಯಕ ಪ್ರಶಸ್ತಿ ಪಡೆದಿರುವ ಹಿನ್ನಲೆಯಲ್ಲಿ ಬುಧವಾರ ಸೃಷ್ಠಿಸಾಗರ ಪ್ರಕಾಶನ ಮತ್ತು ಮದಕರಿ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ವೇಣು ಅವರ ಅಭಿಮಾನಿಗಳು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನಾನು ಯಾವ ಸನ್ಮಾನ, ಪ್ರಶಸ್ತಿಗಾಗಿ ಕೆಲಸ ಮಾಡುವವನಲ್ಲ. ಅದರ ಆಲೋಚನೆಯೂ ಇಲ್ಲ. ನನ್ನ ಕಾಯಕವನ್ನು ನಾನು ಶ್ರದ್ದೆಯಿಂದ ಮಾಡುತ್ತಿದ್ದೇನೆ. ಇದುವರೆಗೂ ನಾನು ಮಾಡಿಕೊಂಡು ಬಂದಿರುವ ಕೆಲಸ, ಸಾಹಿತ್ಯ ಕೃಷಿ, ಸಾಧನೆಗೆ ಜನರು ಅತ್ಯಂತ ಪ್ರೀತಿ, ಅಭಿಮಾನ ತೋರಿದ್ದಾರೆ.ಅದಕ್ಕಿಂತ ಮಿಗಿಲಾದದ್ದು ಏನೂ ಇಲ್ಲ. ನನ್ನ ಬರವಣಿಗೆಗೆ, ಸಾಹಿತ್ಯ ಕೃಷಿಗೆ ಸಿಗಬೇಕಾದ ಎಲ್ಲಾ ಗೌರವ ಸಿಕ್ಕಿದೆ. ಸಾಧನೆಗೆ ಪ್ರತಿಫಲವೂ ಸಿಗುತ್ತಿದೆ ಎನ್ನುವುದು ಸಮಾಧಾನ ತಂದಿದೆ ಎಂದು ಹೇಳಿದರು.

ನಾನು ಬಯಸದೆ ಬಂದ ಪ್ರಶಸ್ತಿಗಳು ಸಾಕಷ್ಟಿವೆ. ಅದರೊಟ್ಟಿಗೆ ವಾಲ್ಮೀಕಿ ಗುರುಪೀಠ ನೀಡುತ್ತಿರುವ ರಾಜವೀರ ಮದಕರಿ ನಾಯಕ ಪ್ರಶಸ್ತಿ ಎಲ್ಲಾ ಪ್ರಶಸ್ತಿ, ಗೌರವಕ್ಕಿಂತಲೂ ಮೌಲ್ಯವಾದದ್ದು ಎಂದು ನಾನು ಭಾವಿಸಿದ್ದೇನೆ. ನಾನು ಈ ನೆಲದ ಮಗ, ಈ ನೆಲದ ಚರಿತ್ರೆಯನ್ನು, ಐತಿಹಾಸಿಕ ಪ್ರಸಂಗಗಳನ್ನು, ಘಟನಾವಳಿಗಳನ್ನು ನನ್ನ ಬರಹಗಳ ಮೂಲಕ ಸಾಲು ಸಾಲಾಗಿ ಕಾದಂಬರಿ  ಕೃತಿಯ ಮೂಲಕ  ಅನಾವರಣಗೊಳಿಸಿದ್ದೇನೆ.

ಚಿತ್ರದುರ್ಗದ ಮದಕರಿ ನಾಯಕರ ಆಳ್ವಿಕೆ, ರಾಜಮಹಾರಾಜರು, ಇಲ್ಲಿನ ಚರಿತ್ರೆ, ಪರಾಕ್ರಮಗಳ ಕುರಿತಾಗಿ ಸಾಕಷ್ಟು ಬರೆದಿದ್ದೇನೆ. ವಿಶೇಷವಾಗಿ ರಾಜವೀರ ಮದಕರಿ ನಾಯಕರ ಕುರಿತು ಕಾದಂಬರಿ ಬರೆಯುವಾಗ ತರಾಸು ಮತ್ತು ತಮ್ಮ ನಡುವೆ ಎದುರಾದ ವೈರತ್ವದ ಹೊರತಾಗಿಯೂ ಬರವಣಿಗೆ ಮುಂದುವರೆಸಿದ್ದೆ. ನಾನು ಸ್ವಾಭಿಮಾನವಿಟ್ಟುಕೊಂಡು ಬಂದವನು. ದುರ್ಗದ ಚರಿತ್ರೆಯನ್ನು ಆಧರಿಸಿ ಬರೆದ ಅನೇಕ ಕೃತಿಗಳಿಗೆ ಜನಮನ್ನಣೆ ಸಿಕ್ಕಿದೆ. ಸಾಕಷ್ಟು ಸಿನಿಮಾಗಳೂ ಆಗಿವೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ವಾಲ್ಮೀಕಿ ಗುರುಪೀಠ ರಾಜವೀರ ಮದಕರಿ ನಾಯಕ ಪ್ರಶಸ್ತಿ ನೀಡಿರುವುದು ನನ್ನಗೆ ತುಂಬಾ ಸಂತಸ ತಂದುಕೊಟ್ಟಿದೆ ಎಂದು ಬಿ.ಎಲ್.ವೇಣು ಹೇಳಿದರು.

ಚಿತ್ರದುರ್ಗದ ಜನರು ನನಗೆ ತೋರಿರುವ ಪ್ರೀತಿ, ಅಭಿಮಾನವನ್ನು ಯಾವತ್ತಿಗೂ ಮರೆಯಲಾರೆ. ಈ ದುರ್ಗದ ನೆಲದಲ್ಲಿಯೇ ನಾನು ಬದುಕಿರುವಾಗಲೇ ನನ್ನ ಹೆಸರಿನಲ್ಲಿ ಒಂದು ವೃತ್ತಕ್ಕೆ ನಾಮಕರಣ ಮಾಡಲಾಗಿದೆ. ಜೊತೆಗೆ ನಗರಸಭೆಯವತಿಯಿಂದ ದೊಡ್ಡ ಗೌರವ ಸಿಕ್ಕಿದೆ. ಇದು ಅಂದು ಅಧ್ಯಕ್ಷರಾಗಿದ್ದ ಬಿ.ಕಾಂತರಾಜು ಅವರು ನನ್ನ ಮೇಲೆ ಇಟ್ಟಿರುವ ಅಭಿಮಾನಕ್ಕೆ ಸಾಕ್ಷೀಕರಿಸುತ್ತಿದೆ ಎಂದು ಹೇಳಿದರು.
ಮದಕರಿ ನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಂದೀಪ್ ಮಾತನಾಡಿ, ಚಿತ್ರದುರ್ಗದ ಚರಿತ್ರೆಯನ್ನು ನಾಡಿನ ಜನರಿಗೆ ತಮ್ಮ ಬರಹಗಳ ಮೂಲಕ ಪ್ರಚುರ ಮಾಡುತ್ತಲೇ ಸಾಹಿತ್ಯ, ಸಿನಿಮಾ ರಂಗದಲ್ಲಿ ದೊಡ್ಡ ಸಾಧನೆ ಮಾಡಿರುವ ಬಿ.ಎಲ್.ವೇಣು ಅವರು ಈ ನೆಲದ ಆಸ್ತಿ. ಅವರ ಕೊಡುಗೆಯನ್ನು ಯಾರೂ ಮರೆಯಲಾಗದು ಎಂದು ಬಣ್ಣಿಸಿದರು.

ನಗರ ಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜು ಮಾತನಾಡಿ, ಸಾಹಿತ್ಯ, ಕಾದಂಬರಿ ಮತ್ತು ಸಿನಿಮಾ ಲೋಕದಲ್ಲಿ ಅವರು ಮಾಡಿರುವ ಸಾಧನೆಯನ್ನು ಇಡೀ ನಾಡು ಮೆಚ್ಚಿದೆ. ಇದುವರೆಗೆ ಅವರಿಗೆ ಸಿಗಬೇಕಾಗಿರುವ ಎಲ್ಲಾ ಸ್ಥಾನ ಮಾನಗಳೂ ಸಿಕ್ಕಿವೆ, ಪ್ರಶಸ್ತಿಗಳೂ ಲಭಿಸಿವೆ. ಇನ್ನೂ ಯಾವುದಾದರೂ ಪ್ರಶಸ್ತಿ ಉಳಿದಿದ್ದರೆ ಅದರು ವೇಣು ಅವರಂತಹ ಮೇರು ವ್ಯಕ್ತಿತ್ವದ ಲೇಖಕರಿಗೆ ಸಿಕ್ಕೆರೆ ಆ ಪ್ರಶಸ್ತಿಗೆ ಗೌರವ ಹೆಚ್ಚುತ್ತದೆ ಎಂದರು.

ವಿಜಯ ಸೇನೆ ಸಂಘಟನೆಯ ಜಿಲ್ಲಾದ್ಯಕ್ಷ ಕೆ.ಟಿ.ಶಿವಕುಮಾರ್ ಈ ಸಂದರ್ಭದಲ್ಲಿ ಮಾತನಾಡಿ, ಡಾ.ಬಿ.ಎಲ್.ವೇಣು ಅವರ ಬರಹಗಳು ಸಮಾಜ ಬದಲಾವಣೆಗೆ ಪೂರಕವಾಗಿವೆ. ಅನೇಕ ಶೋಷಿತರಿಗೆ ಅವರ ಬರಹಗಳು ದ್ವನಿ ನೀಡಿವೆ. ಹೋರಾಟಗಳಿಗೂ ಸ್ಪೂರ್ತಿ ನೀಡಿವೆ. ಇಂದಿಗೂ ಅನೇಕ ಚಳುವಳಿಗಾರರು, ಯುವಕರು, ಇನ್ನತರೆ ಸಾಮಾಜಿಕ ಕಾರ್ಯಕರ್ತರಿಗೆ ವೇಣು ಅವರ ಬರಹ, ಬದುಕು ಪ್ರೇರಣೆ ನೀಡಿವೆ. ಇಂತಹ ಲೇಖಕರಿಗೆ ಮುಂದಿನ ದಿನಗಳಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯೂ ಸಿಗಬೇಕು ಎಂದು ಆಶಿಸಿದರು
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಧರ್ಮದರ್ಶಿಗಳಾದ ಹರ್ತಿಕೋಟೆ ವೀರೇಂದ್ರ ಸಿಂಹ ಅವರ ಮಾತನಾಡಿ, ಡಾ.ಬಿ.ಎಲ್,ವೇಣು ಅವರ ಸಾಹಿತ್ಯ ಕ್ಷೇತ್ರದ ಸಾಧನೆ, ಸಿನಿಮಾ ರಂಗದಲ್ಲಿ ಅವರು ಮಾಡಿರುವ ಹೆಸರು ಯಾರೂ ಮರೆಯಲಾಗದು. ಅವರ ಅಪ್ರತಿಮ ಸಾಧನೆಯನ್ನು ಗುರ್ತಿಸಿ ಶ್ರೀಮಠ ಈ ಪ್ರಶಸ್ತಿ ನೀಡಿದೆ ಎಂದರು.

ಸೃಷ್ಠಿಸಾಗರ ಪ್ರಕಾಶನ ಮುಖ್ಯಸ್ಥ ಹಾಗೂ ಲೇಖಕ ಮೇಘ ಗಂಗಾಧರ ನಾಯ್ಕ, ಮದಕರಿ ಸಾಂಸ್ಕ್ರತಿಕ ಕೇಂದ್ರದ ಮುಖ್ಯಸ್ಥ ಡಿ.ಗೋಪಾಲಸ್ವಾಮಿ ನಾಯಕ್, ಅಹೋಬಲ ಟಿವಿಎಸ್ ಶೋ ರೂಂ ಮಾಲೀಕ ಅರುಣ್, ಸಾಹಿತಿಗಳಾದ ಷರೀಫಾಭಿ, ಲಲಿತಾ ಕೃಷ್ಣಮೂರ್ತಿ, ಸೋಮಶೇಖರ್, ಇನ್ನಿತರರು ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!