ಮಂಗಳೂರು: ಬೆಂಗಳೂರು ಟ್ರಾಫಿಕ್ ನಲ್ಲಿ ಕೆಲಸಕ್ಕೆ ತಲುಪೋದು ಅಂದ್ರೆ ಅದು ಸುಲಭದ ಮಾತಲ್ಲ. ಮೆಟ್ರೋ ಬಂದಾಗಿನಿಂದ ಸಿಲಿಕಾನ್ ಸಿಟಿ ಮಂದಿ ಕೊಂಚ ಸಮಾಧಾನದಿಂದ ಓಡಾಡುವಂತೆ ಆಗಿದೆ. ಸರಿಯಾದ ಸಮಯಕ್ಕೆ ಕಚೇರಿಗೆ ತಲುಪುವಂತೆ ಆಗಿದೆ. ಆದರೆ ಒಂದೇ ಸಮನೇ ದರ ಏರಿಕೆ ಮಾಡುತ್ತಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ಡಬ್ಬಲ್ ರೇಟ್ ದರ ಜಾಸ್ತಿ ಮಾಡಿದೆ. ಈಗ ಮತ್ತೆ ದರ ಏರಿಕೆಯ ವಿಚಾರಕ್ಕೆ ಪ್ರಯಾಣಿಕರು ಆಕ್ರೋಶಗೊಂಡಿದ್ದು, ಬಾಯ್ಕಾಟ್ ಮೆಟ್ರೋ ಅಭಿಯಾನ ಶುರು ಮಾಡಿದ್ದಾರೆ. ಈ ಸಂಬಂಧ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು ಮೆಟ್ರೋ ದರ ಪರಿಷ್ಕರಣೆ ವಿಚಾರವಾಗಿ ನಮಗಮನ್ನ ಯಾರೂ ಸಂಪರ್ಕ ಮಾಡಿಲ್ಲ. ಮೆಟ್ರೋ ಚೇರ್ಮನ್ ಆಗಿ ಕೇಂದ್ರ ಸರ್ಕಾರದ ಚೇರ್ಮನ್ ಇದ್ದಾರೆ. ಇವತ್ತು ಅಥವಾ ನಾಳೆ ಅವರ ಜೊತೆ ಮಾತನಾಡುತ್ತೇನೆ. ಜನರಿಗೆ ತೊಂದರೆ ಕೊಡೋಕೆ ಬಿಡಲ್ಲ. ಮೆಟ್ರೋ ದರ ಪರಿಷ್ಕರಣೆ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.
ಇನ್ನು ಮೆಟ್ರೋ ದರ ಏರಿಕೆ ಸಂಬಂಧ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಕುಮಾರಸ್ವಾಮಿ ಕೂಡ ಪ್ರತಿಕ್ರಿಯೆ ನೀಡಿದ್ದು, ಯಾವುದೇ ದರ ನಿಗದಿ ಮಾಡಿದ್ರು ಜನ ಸಂತೋಷವಾಗಿ ಕೊಡ್ತಾರೆ ಅನ್ನೋದು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಭ್ರಮೆ. ಈ ಬಗ್ಗೆ ಎಚ್ಚೆತ್ತುಕೊಂಡು ಜನರೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ. ಈ ಎಲ್ಲಾ ಬೆಳವಣಿಗೆಯ ನಡುವೆ ದರ ಏರಿಕೆಯಾಗುತ್ತಾ ಇಲ್ಲ ಈಗಿರುವಷ್ಟೇ ಇರುತ್ತಾ ನೋಡಬೇಕಿದೆ.















