ಬೆಂಗಳೂರು: ಪುನೀತ್ ರಾಜ್‍ಕುಮಾರ್ ಯಾವಾಗಲೂ ವರ್ಕೌಟ್ ಮಾಡಿ, ತಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳುತ್ತಿದ್ದರು. ಆದರೂ ಸಡನ್ ಆಗಿ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ್ದಾರೆ. ಇದು ಸಾಕಷ್ಟು ಜನರಿಗೆ ಆರೋಗ್ಯದ ಬಗ್ಗೆ ಆತಂಕ ಶುರುವಾಗಿದೆ.
ಹೃದಯ ಸಂಬಂಧಿ ಕುರಿತು ಜನರು ಪ್ಯಾನಿಕ್ ಶುರುವಾಗಿದ್ದು, ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಇರುವವರು ಕೂಡ ಹೃದಯ ತಪಾಸಣೆಗೆ ಮುಂದಾಗಿದ್ದಾರೆ. ಜಯದೇವ ಆಸ್ಪತ್ರೆಗೆ ಒಂದೇ ದಿನ 1,270 ಜನ ಹೃದಯ ಸಂಬಂಧಿ ತಪಾಸಣೆ ಮಾಡಿಸಿದ್ದಾರೆ. ಜಿಮ್ ಮಾಡುವವರೆ ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣೆಗೆ ಬಂದಿದ್ದಾರೆ.
ಆತಂಕಕ್ಕೀಡಾಗಿರೋ ಜನರಿಗೆ ಡಾ. ಮಂಜುನಾಥ್ ಸಲಹೆ ನೀಡಿದ್ದಾರೆ. ವ್ಯಾಯಾಮ ಮಾಡುವುದು ಒಳ್ಳೆಯ ಅಭ್ಯಾಸ. ಆದ್ರೆ ಅತಿಯಾದ ವರ್ಕೌಟ್ ಮಾಡುವುದು ಒಳ್ಳೆಯದ್ದಲ್ಲ. 30 ಕೆಜಿ ಭಾರ ಎತ್ತುವ ಸಾಮರ್ಥ್ಯ ಇರುವವನು, 70 ಕೆಜಿ ತೂಕ ಎತ್ತಿದರೆ ಅಪಾಯ ಎಂದಿದ್ದಾರೆ.
ಒಂದೆರಡು ಕೇಸ್ ಗಳಿಗೆ ಭಯಪಡುವ ಅಗತ್ಯವಿಲ್ಕ. ಜಿಮ್ ಮಾಡುವವರು ಪ್ರೊಟೀನ್ ಸೇವಿಸಬೇಕು. ಮೆಳಕೆ ಕಾಳುಗಳನ್ನು ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಬೇಕು. ದಿನಕ್ಕೆ 40 ನಿಮಿಷವಷ್ಟೆ ವ್ಯಾಯಾಮ ಮಾಡುವುದು ಉತ್ತಮ ಎಂದಿದ್ದಾರೆ.