ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ, ಕಾಂಗ್ರೆಸ್ ನಾಯಕರು ಜನವರಿ 9 ರಿಂದ ಪಾದಯಾತ್ರೆ ನಡೆಸಲು ಸಜ್ಜಾಗಿದ್ದಾರೆ. ಮೇಕೆದಾಟು ಪ್ರದೇಶದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೂ ಪಾದಯಾತ್ರೆ ನಡೆಸಲು ಸಜ್ಜಾಗಿದ್ದಾರೆ. ಈ ಬಗ್ಗೆ ಸಚಿವ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವಿದ್ದಾಗ ಯಾಕೆ ಮೇಕೆದಾಟು ಬಗ್ಗೆ ಚಕಾರವೆತ್ತಿಲ್ಲ. ಐದು ವರ್ಷ ಸಿದ್ದರಾಮಯ್ಯ ಫೈನಾನ್ಸ್ ಮಿನಿಸ್ಟರ್ ಆಗಿದ್ರು. ಡಿಪಿಆರ್ ಮಾಡೋದಕ್ಕೆ ಮೂರು ತಿಂಗಳು ಬೇಕಾಗುತ್ತೆ. ಆದ್ರೆ ಆರು ತಿಂಗಳು ತೆಗೆದುಕೊಂಡ್ರು.
ಐದು ವರ್ಷ ಏನ್ ಮಾಡ್ತಿದ್ರು. ಆರು ವರ್ಷ ಕಡಲೆಕಾಯಿ ತಿಂತಿದ್ರು. ಮೇಕೆ ಮಾಂಸ ಸಿಗುತ್ತೆ ಮೇಕೆದಾಟಿಗೆ ಹೊರಟಿದ್ದಾರೆ. ಇವ್ರಿಗೆ ಮೇಕೆನೂ ಸಿಗಲ್ಲ ಮಾಂಸನೂ ಸಿಗಲ್ಲ ಎಂದು ಆಕ್ರೋಶಿತರಾಗಿದ್ದಾರೆ.