ಹೈದರಾಬಾದ್: ದೇಶದೆಲ್ಲೆಡೆ ಮಳೆಯ ಆರ್ಭಟ ಎಷ್ಟಿದೆ ಅಂದ್ರೆ ಸಾವು – ನೋವುಗಳ ಸಂಖ್ಯೆಯೇ ಹೆಚ್ಚಾಗಿದೆ. ಮನೆಗಳು ಕುಸಿದಿವೆ, ರಸ್ತೆಗಳ ಸಂಪರ್ಕ ಕಳೆದುಕೊಂಡಿವೆ. ಸಾವಿನ ಸಂಖ್ಯೆ ಏರಿಕೆಯಾಗುತ್ತಲೆ ಇದೆ. ಅದರಲ್ಲೂ ತೆಲಂಗಾಣದ ಜೋರು ಮಳೆಗೆ ಪ್ರವಾಹವೇ ಸೃಷ್ಟಿಯಾಗಿದೆ. ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ತೆಲಂಗಾಣದಲ್ಲಿ ಸೃಷ್ಟಿಯಾಗಿರುವ ಭೀಕರ ಪ್ರವಾಹಕ್ಕೆ ಸಾವಿನ ಸಂಖ್ಯೆ ಜಾಸ್ತಿಯಾಗಿದೆ. 17 ಮಂದಿ ಬಲಿಯಾಗಿದ್ದಾರೆ. ಅಷ್ಟೇ ಅಲ್ಲ 10ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರಬಹುದು ಎನ್ನಲಾಗಿದೆ. ಹಲವರ ದೇಹಗಳು ಸಿಕ್ಕಿಲ್ಲವಾದ್ದರಿಂದ ಅಧಿಕೃತವಾಗಿ ಏನನ್ನು ಹೇಳಲು ಸಾಧ್ಯವಾಗಿಲ್ಲ.
ತೆಲಂಗಾಣದಲ್ಲಿ ಇಷ್ಟು ದೊಡ್ಡ ಮಟ್ಟದ ಅವಾಂತರ ಸೃಷ್ಟಿಯಾಗಿದ್ದರು, ಸಿಎಂ ಕೆಸಿ ಚಂದ್ರಶೇಖರ್ ಮಾತ್ರ ಯಾವುದೇ ರೀತಿಯ ಕಾಳಜಿ ತೋರಿದಂತೆ ಕಾಣುತ್ತಿಲ್ಲ. ಮನೆಯಿಂದ ಹೊರಗಡೆಯೇ ಬರ್ತಿಲ್ಲ ಎಂದು ಜನ ಆರೋಪಿಸುತ್ತಿದ್ದಾರೆ. ಅಷ್ಟೇ ಅಲ್ಲ ಹೈಕೋರ್ಟ್ ನಲ್ಲಿ ಪಿಐಎಲ್ ಅರ್ಜಿ ಕೂಡ ಸಲ್ಲಿಕೆಯಾಗಿತ್ತು. ಇದಕ್ಕೆ ಕೆಸಿಆರ್ ಪುತ್ರ ಉತ್ತರಿಸಿದ್ದು, ಸದ್ಯದಲ್ಲೆ ಸಾವು ನೋವಿನ ಲೆಕ್ಕಚಾರ ಕೊಡುವುದಾಗಿ ಹೇಳಿದ್ದಾರೆ.