ಸುದ್ದಿಒನ್, ಚಿತ್ರದುರ್ಗ,ಜನವರಿ. 29 : ನಮ್ಮ ಜನಗಳಿಗೆ ವಿಜ್ಞಾನದ ಆವಿಷ್ಕಾರಗಳು ಬೇಕು ಆದರಿಂದ ಕಂಡು ಹಿಡಿದ ಮೊಬೈಲ್ .ಟಿ.ವಿ. ವಾಟ್ಸಾಪ್, ಕಾರುಗಳು ಬೇಕು, ಆದರೆ ವೈಜ್ಞಾನಿಕವಾದ ಚಿಂತನೆ ಬೇಡವಾಗಿದೆ ಎಂದು ರಾಷ್ಟ್ರೀಯ ವಿಚಾರವಾದಿಗಳ ಸಂಘ, ಕರ್ನಾಟಕದ ಅಧ್ಯಕ್ಷರಾದ ಪ್ರೊ. ನರೇಂದ್ರ ನಾಯಕ್ ತಿಳಿಸಿದರು.
ನಗರದ ಹೊರವಲಯದ ಭೋವಿಗುರುಪೀಠದಲ್ಲಿ ಎಸ್.ಜೆ.ಎಸ್. ಸಮೂಹ ಸಂಸ್ಥೆವತಿಯಿಂದ ಎಸ್ಜೆಎಸ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ವೈಜ್ಞಾನಿಕತೆಗಿರುವ ಸವಾಲು ಹಾಗೂ ಪರಿಹಾರೋಪಾಯಗಳು” ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಮಾನವರಾದವರು ಯಾವುದೇ ವಿಷಯವನ್ನು ಪ್ರಶ್ನಿಸದೇ ಒಪ್ಪಿಕೊಳ್ಳಬಾರದು, ನಾವು ಯಾವುದನ್ನು ಪ್ರಶ್ನಿಸದೇ ಇರುವುದರಿಂದಲೇ ನಮ್ಮ ಮೇಲೆ ವಿವಿಧ ಜನತೆ ಗದಾ ಪ್ರಹಾರವನ್ನು ವಿವಿಧ ರೀತಿಯಲ್ಲಿ ಮಾಡುತ್ತಿದ್ದಾರೆ. ನಮ್ಮ ಸಂವಿಧಾನದಲ್ಲಿಯೇ ಕಲಂ 51ಎ.ಎಚ್ ಅಡಿಯಲ್ಲಿ ಜನತೆಯ ಕರ್ತವ್ಯಗಳು ಹಾಗೂ ಹಕ್ಕುಗಳನ್ನು ನೀಡಿದೆ ಇದರ ಬಗ್ಗೆ ಎಲ್ಲರು ತಿಳಿಯಬೇಕಿದೆ. ಇದನ್ನು ನಾವುಗಳು ಸಂವಿಧಾನ ಬದ್ದವಾಗಿ ಈ ಕಾರ್ಯವನ್ನು ಮಾಡಬೇಕಿದೆ ಎಂದರು.
ಪ್ರಶ್ನಿಸುವ ಪ್ರವೃತ್ತಿ ಇಲ್ಲದಿದ್ದರೆ ಬೇರೆಯವರು ಹೇಳಿದ್ದನ್ನು ಕೇಳುವಂತ ಮನೋಭಾವ ಮೂಡುತ್ತದೆ. ಕೆಲವು ವಂಚಕರ ಜನರಲ್ಲಿ ಇರುವಂತ ಪ್ರಶ್ನಿಸುವ ಮನೋಭಾವ ಇಲ್ಲದಿರುವದನ್ನು ಮನಗಂಡು ಅದರ ಲಾಭವನ್ನು ಪಡೆಯುತ್ತಿದ್ದಾರೆ. ಇದರಿಂದ ಅವರನ್ನು ಶೋಷಣೆ ಮಾಡುತ್ತಿದ್ದಾರೆ. ಕೆಲಸವನ್ನು ಮಾಡದೇ ಜನರಿಗೆ ಸುಳ್ಳುಗಳನ್ನು ಜೋತಿಷ್ಯದ ಮೂಲಕ ತಿಳಿಸಿ ಸಂಖ್ಯಾಶಾಸ್ತ್ರ ಪವಾಡಗಳು, ಎಲ್ಲವು ಜನರನ್ನು ಮೋಸ ಮಾಡುವ ಬೇರೆ ಬೇರೆ ವಿಧಾನಗಳಾಗಿವೆ. ಇದಕ್ಕಿಂತ ಮಿಗಿಲಾಗಿ ಸ್ವರ್ಗ, ನರಕ ಇದೆಲ್ಲವನ್ನು ದುಡಿಯದ ವರ್ಗ ಸೃಷ್ಟಿ ಮಾಡಿ ದುಡಿಯವ ವರ್ಗದ ಜನರನ್ನು ಶೋಷಣೆ ಮಾಡುತ್ತಿದೆ. ದುಡಿಯದ ವರ್ಗದವರು ಬೇರೆಯವರಿಗೆ ಸ್ವರ್ಗವನ್ನು ತೋರಿಸುತ್ತೇನೆ ಎಂದು ತಿಳಿಸಿ ಅವರನ್ನು ಭ್ರಮೆಯಲ್ಲಿ ಇರಿಸಿ ಕುಳಿತು ತಿನ್ನುವ ವರ್ಗ ಮನುಷ್ಯನ ಶೋಷಣೆಯ ಪ್ರವೃತ್ತಿಯಾಗಿದೆ ಎಂದು ವಿಷಾಧಿಸಿದರು.
ಇದನ್ನು ಬಯಲಿಗೆ ಎಳೆಯುವ ಕಾರ್ಯವಾಗಬೇಕಿದೆ. ಇದಕ್ಕೆ ವೈಜ್ಞಾನಿಕ ಚಿಂತನೆÀಯನ್ನು ಮೈಗೂಡಿಸಿಕೊಳ್ಳಬೇಕಿದೆ. ಜಗತ್ತಿನಲ್ಲಿ ಇಲ್ಲಿಯವರೆಗೆ ಆಗಿರುವ ಪ್ರಗತಿ ಇದರಿಂದಲೇ ಆಗಿದೆ. ಯಾವುದೇ ಭಕ್ತಿಯಿಂದಾಗಲಿ ಯಾವುದೆ ಮೌಢ್ಯದಿಂದಾಗಲಿ, ಪ್ರಗತಿಯನ್ನು ಹೊಂದಿಲ್ಲ, ಪ್ರಗತಿಯನ್ನು ಸಾಧಿಸಿದ್ದು ಬರೀ, ವೈಜ್ಞಾನಿಕ ಮನೋಭಾವದಿಂದ ಮಾತ್ರ, ನಮ್ಮ ಜನಗಳಿಗೆ ವಿಜ್ಞಾನದ ಆವಿಷ್ಕಾರಗಳು ಬೇಕು ಆದರಿಂದ ಕಂಡು ಹಿಡಿದ ಮೊಬೈಲ್ .ಟಿ.ವಿ. ವಾಟ್ಸಾಪ್, ಕಾರುಗಳು ಬೇಕು, ಆದರೆ ವೈಜ್ಞಾನಿಕವಾದ ಚಿಂತನೆ ಬೇಡವಾಗಿದೆ. ಇದಾದ ನಂತರ ಇದಕ್ಕೆ ಸಬೂಬನ್ನು ಹೇಳಲಾಗುತ್ತದೆ ಇದು ನಮ್ಮಲ್ಲೇ ಇತ್ತು ಸಾವಿರಾರು ವರ್ಷಗಳಿಂದ ಎಂದು ಈಗ ಚೀನಾ ದೇಶ ನಮ್ಮ ದೇಶಕ್ಕಿಂತ ಹಿಂದೆ ಇತ್ತು ಆದರೆ ಈಗ ಅದು ಎಲ್ಲ ದೇಶಗಳನ್ನು ಮೀರಿಸುವಂತೆ ಬೆಳೆದು ನಿಂತಿದೆ. ಜಪಾನ್ ದೇಶವೂ ಸಹಾ ಪ್ರಗತಿಯನ್ನು ಸಾಧಿಸಿದೆ, ಇದಕ್ಕೆಲ್ಲಾ ಕಾರಣ ಯಾವುದೇ ಮತ, ಧರ್ಮವಲ್ಲ, ಅಚರಣೆ ಅಲ್ಲ ಇದಕ್ಕೆ ಕಾರಣ ವೈಜ್ಞಾನಿಕ ಚಿಂತನೆಗಳಾಗಿವೆ. ಇದನ್ನು ಮೈಗೊಡಿಸಿಕೊಂಡಾಗ ಮಾತ್ರ ದೇಶ ಪ್ರಗತಿಯನ್ನು ಕಾಣಲು ಸಾಧ್ಯವಿದೆ. ಮೌಢ್ಯಗಳಿಂದ ದೇಶ ಪ್ರಗತಿ ಸಾಧ್ಯವಿಲ್ಲ ಇದನ್ನು ಸ್ಪಷ್ಟವಾಗಿ ನೆನಪು ಇಟ್ಟುಕೊಂಡರೆ ಮಾತ್ರ ದೇಶ ಬಲಿಷ್ಠವಾಗಿ ಬೆಳೆಯಲು ಸಾಧ್ಯವಿದೆ ಎಂದು ನುಡಿದರು.
ವೈಜ್ಞಾನಿಕ ಚಿಂತನೆ ಎಂದರೆ ಬರೀ ತಂತ್ರಜ್ಞಾನವಲ್ಲ ಮೂಲಭೂತವಾದ ಸಂಶೋಧನೆಗಳು ನಡೆದಾಗ ಮಾತ್ರ ದೇಶದ ಗಂಭೀರವಾದ ವಿಷಯಗಳನ್ನು ಬಿಟ್ಟು ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಗಹನವಾದ ಚರ್ಚೆಯ ಬಗ್ಗೆ ತಲೆ ಕೆಡಿಸಿಕೊಳ್ಳಲಾಗುತ್ತಿದ್ದೇವೆ. ಇಂದಿನ ವೈಭವದಲ್ಲಿ ನಮ್ಮನ್ನು ಮರೆಯಲಾಗುತ್ತಿದೆ. ಇದನ್ನು ಬಿಟಟು ವಾಸ್ತವಿಕತೆಯನ್ನು ಅರ್ಥ ಮಾಡಿಕೊಂಡಾಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯವಿದೆ ಎಂದು ನರೇಂದ್ರ ನಾಯ್ಕ ಭವಿಷ್ಯ ನುಡಿದರು.
ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಸಿಇಓ ಗೌನಹಳ್ಳಿ ಗೋವಿಂದಪ್ಪ ಉಪಸ್ಥಿತರಿದ್ದರು.