ಚಿಕ್ಕಮಗಳೂರು: ರಾಜಕೀಯ ಪಕ್ಷದ ಕಾರ್ಯಕರ್ತರು ಜನರನ್ನು ಸೆಳೆಯಲು ಏನೋನೋ ಸಾಹಸ ಮಾಡುತ್ತಾರೆ. ತಮ್ಮ ತಮ್ಮ ಪಕ್ಷದ ಬಗ್ಗೆ ಏನೋನೋ ಹೇಳುತ್ತಾರೆ. ಸಾಕಷ್ಟು ಭರವಸೆಗಳನ್ನು ನೀಡುತ್ತಾರೆ. ಆದ್ರೆ ಇಲ್ಲೊಬ್ಬ ಕಾರ್ಯಕರ್ತ ಸ್ತಳೀಯರನ್ನೇ ರೊಚ್ಚುಗೇಳಿಸುವಂತ ಸ್ಟೇಟಸ್ ಆಗಿ, ಗಲಾಟೆ ಉಂಟಾಗುವಂತೆ ಮಾಡಿದ್ದಾರೆ.
ನಿನ್ನೆ ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆದಿದೆ. ರಂಗೇನಹಳ್ಳಿ ಗ್ರಾಮದ ನಿವಾಸಿ ಕಾರ್ತೀಕ್ ಬಜರಂಗ ದಳದ ಕಾರ್ಯಕರ್ತ. ಬಿಜೆಪಿ ಪರ ಪ್ರಚಾರ ಮಾಡುತ್ತಿರುವಾಗ, ವಾಟ್ಸಾಪ್ ಸ್ಟೇಟಸ್ ನಲ್ಲಿ ಬೇರೆಯದ್ದೇ ರೀತಿಯಲ್ಲಿ ಸ್ಟೇಟಸ್ ಹಾಕಿದ್ದಾರೆ. “ಯಾರ ಹೆಂಡ್ತಿ ಪತಿವ್ರತೆಯೋ ಅವರೆಲ್ಲಾ ಬಿಜೆಪಿಗೆ ವೋಟ್ ಹಾಕಿ” ಎಂದು ವಾಟ್ಸಾಪ್ ಸ್ಟೇಟಸ್ ಹಾಕಿದ್ದಾರೆ.
ಇದನ್ನು ಕಂಡ ಸ್ಥಳೀಯರು ರೊಚ್ಚಿಗೆದ್ದಿದ್ದಾರೆ. ಲಕ್ಕವಳ್ಳಿ ಪೊಲೀಸ್ ಠಾಣೆಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ. ಕಾರ್ತಿಕ್ ನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಮತ ಹಾಕಿ ಎಂದು ಹೇಳುವುದಕ್ಕೆ ಹೊರಟ ಕಾರ್ತಿಕ್, ಹೆಂಡತಿಯರ ವಿಚಾರಕ್ಕೆ ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ.