ತುಮಕೂರು: ಕಾಲ ಅದೆಷ್ಟೇ ಬದಲಾದರೂ ಮನುಷ್ಯನಲ್ಲಿ ಜಾತಿ ಗುಣ ಬೇರು ಸಮೇತ ಕಿತ್ತೊಗೆಯಲು ಸಾಧ್ಯವಾಗಲೇ ಇಲ್ಲ. ಮೇಲ್ಜಾತಿ, ಕೆಳಜಾತಿ ಅಂತ ಶತಮಾನಗಳು ಉರಯಳಿದರು, ಮಕ್ಕಳೆಲ್ಲಾ ವಿದ್ಯಾವಂತರಾದರೂ ಕೂಡ ಕೆಟ್ಟ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಲೆ ಇದ್ದಾರೆ. ದಲಿತರ ಕೇರಿಗಳಿಗೆ ಹೋಗುವುದಕ್ಕೆ ಹಿಂದೇಟು ಹಾಕುತ್ತಾರೆ. ಇದೀಗ ಮತ್ತೊಂದು ಘೋರ ಘಟನೆ ತುಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹುಣಸೇಘಟ್ಟ ಗ್ರಾಮದಲ್ಲಿ ನಡೆದಿದೆ.

ಈ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನವೊಂದಿದೆ. ಅದು ಮುಜರಾಯಿ ಇಲಾಖೆಗೆ ಸೇರಿದ್ದಾಗಿದೆ. ಪ್ರತಿ ವತ್ಷ ಆಂಜನೇಯನ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಈ ಬಾರಿಯೂ ಏಪ್ರಿಲ್ 23-24 ರಂದು ಜಾತ್ರೆ ನಡೆದಿದೆ. ಜಾತ್ರೆ ವೇಳೆ ಊರಲ್ಲೆಲ್ಲಾ ದೇವರನ್ನು ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆ ಮಾಡುವಾಗ ದಲಿತರ ಏರಿಯಾ ಬಂತು ಅಂತ ದೇವರನ್ನು ಹಾಗೇ ತೆಗೆದುಕೊಂಡು ಹೋಗಿದ್ದಾರೆ.

ದಲಿತರು ಬೇರೆ ಬೀದಿಯಲ್ಲಿ ವಾಸ ಮಾಡುತ್ತಿದ್ರು. ಅಲ್ಲಿಯೂ ಲಕ್ಷ್ಮೀ ದೇವರ ದೇವಸ್ಥಾನವೊಂದಿದೆ. ದೇವಸ್ಥಾನಕ್ಕಾದರೂ ಕರೆತನ್ನಿ ಎಂದರೂ ಕೇಳದೆ ವಾಪಸ್ ಕರೆದುಕೊಂಡು ಹೋಗಿದ್ದಾರೆ. ದಲಿತರ ಕೇರಿಗೆ ದೇವರು ಹೋದರೆ ಮೈಲಿಗೆಯಾಗುತ್ತದೆ. ದೇವರನ್ನು ಕಳುಹಿಸಲ್ಲ ಎಂದಿದ್ದಾರೆ. ದಲಿತರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಈ ಸಂಬಂಧ ಗ್ರಾಮಸ್ಥರ ವಿರುದ್ಧ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

